ಕೊಯಿಲ: 24ನೇ ವರ್ಷದ ಶಾರದೋತ್ಸವಕ್ಕೆ ಚಾಲನೆ

0
7

ಬಂಟ್ವಾಳ : ಇಲ್ಲಿನ ರಾಯಿ-ಕೊಯಿಲ-ಅರಳ ಹಿಂದೂ ಧಮರ್ೋತ್ಥಾನ ವೇದಿಕೆ ಟ್ರಸ್ಟ್ ವತಿಯಿಂದ ಸೋಮವಾರ ಆರಂಭಗೊಂಡ 24ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಕಾರ್ಯಕ್ರಮಕ್ಕೆ ಪ್ರಗತಿಪರ ಕೃಷಿಕ ವಸಂತ ಗೌಡ ಮುದ್ದಾಜೆ ಇವರು ಧ್ವಜಾರೋಹಣ ಮೂಲಕ ಚಾಲನೆ ನೀಡಿದರು.

ಕೊಯಿಲ ಹನುಮಾನ್ ನಗರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಎಂ.ದುಗರ್ಾದಾಸ್ ಶೆಟ್ಟಿ ಮಾವಂತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾರದೋತ್ಸವ ಸಮಿತಿ ಅಧ್ಯಕ್ಷ ದಿನೇಶ ಶೆಟ್ಟಿ ಮಡಂದೂರು, ಟ್ರಸ್ಟಿ ವಸಂತ ಕುಮಾರ್ ಅಣ್ಣಳಿಕೆ, ಪ್ರಮುಖರಾದ ಡೊಂಬಯ ಅರಳ, ಉಮೇಶ ಅರಳ, ಹರೀಶ ಬಾಡಬೆಟ್ಟು, ರಮಾನಾಥ ರಾಯಿ, ಪ್ರಶಾಂತ ಶೆಟ್ಟಿ ಕೊಯಿಲ, ಹರೀಶ ಆಚಾರ್ಯ, ರಾಘವ ಅಮೀನ್, ಮನೋಹರ ಕೊಯಿಲ ಮತ್ತಿತರರು ಇದ್ದರು.