ಮಂಡೆಕೋಲು ಸಹಕಾರಿ ಕ್ರೀಡಾಕೂಟದ ಮ್ಯಾರಥಾನ್‌ನಲ್ಲಿ ಒಂದೇ ಕುಟುಂಬದ ಅವಳಿ ಮಕ್ಕಳು, ತಂದೆಯ ಸಾಧನೆ

0
18

ಸುಳ್ಯ : ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸಹಕಾರ ಸಪ್ತಾಹ ಪ್ರಯುಕ್ತ ಸಹಕಾರಿ ಕ್ರೀಡಾಕೂಟ ಮ್ಯಾರಥಾನ್ ಸ್ಪರ್ಧೆಯಲ್ಲಿ ಒಂದೇ ಕುಟುಂಬದ ಅವಳಿ ಮಕ್ಕಳು ಹಾಗೂ ತಂದೆಯ ಸಾಧನೆ

ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸಹಕಾರ ಸಪ್ತಾಹ ಪ್ರಯುಕ್ತ ಸಹಕಾರಿ ಕ್ರೀಡಾಕೂಟ ಮ್ಯಾರಥಾನ್ ಸ್ಪರ್ಧೆಯಲ್ಲಿ 18 ವರ್ಷ ಬಾಲಕಿಯರ ವಿಭಾಗದಲ್ಲಿ ಸುಳ್ಯ ತಾಲೂಕು ಜಾಲ್ಸೂರು ವಿನೋಭಾನಗರ ವಿವೇಕಾನಂದ ವಿದ್ಯಾಸಂಸ್ಥೆಯ 9 ನೇ ತರಗತಿಯ ಅವಳಿ ವಿದ್ಯಾರ್ಥಿಗಳಾದ ಕು. ಹೀಮನ್ಯ ಪ್ರಥಮ ಸ್ಥಾನ, ಕು. ಹೀಮಶ್ರೀ ದ್ವಿತೀಯ ಸ್ಥಾನ ಹಾಗೂ ಇವರ ತಂದೆ ತಾರಾನಾಥ ಪುರುಷರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ವೈಯಕ್ತಿಕ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.