ಆರೋಗ್ಯದ ಬಗ್ಗೆ ಕಾಳಜಿ ಇರಲಿ, ನಿಯಮಿತ ತಪಾಸಣೆ ಮಾಡಿಸಿ: ಶಾಸಕ ಎ.ಕೆ.ಎಂ. ಅಶ್ರಫ್

0
29

ಮಂಜೇಶ್ವರ : “ಆರೋಗ್ಯವೇ ನಮ್ಮ ಭಾಗ್ಯ”ನಮ್ಮ ಆರೋಗ್ಯದ ಬಗ್ಗೆ ಕಾಲಜಿ ಇರಬೇಕು. ನಮ್ಮ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಒಳ್ಳೆಯ ಸೌಲಭ್ಯಗಳನ್ನು ಇರುವ ಕಾರಣ ನಾವು ಮೂರು ಅಥವಾ ಆರು ತಿಂಗಳಿಗೆ ಒಮ್ಮೆ ಆರೋಗ್ಯ ತಪಾಸಣೆ ಮಾಡಿದರೆ ಒಳ್ಳೆಯದು. ಅಥವಾ ಊರಿನ ಜನರ ಒಳಿತಿಗಾಗಿ ಗೆಳೆಯರ ಬಳಗದಂತಹ ಸಂಸ್ಥೆಯು ಮಾಡುವ ಇಂತಹ ಶಿಬಿರಗಳಲ್ಲಿ ಆ ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಮಂಜೇಶ್ವರ ಶಾಸಕರಾದ ಎ.ಕೆ.ಎಂ.ಅಶ್ರಪ್ ರವರು ಗೆಳೆಯರ ಬಳಗ (ರಿ) ಬಲ್ಲಂಗುಡೆಲು ಆಯೋಜಿಸಿದ್ದ ಉಚಿತ ವೈದ್ಯಕೀಯ ಶಿಬಿರ ಮತ್ತು ರಕ್ತದಾನ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿತ್ತಾ ಶಿಬಿರಕ್ಕೆ ಶುಭವನ್ನು ಹಾರೈಸಿದರು.

ಅಕ್ಟೋಬರ್ 25ರಂದು ಸರಕಾರಿ ಪ್ರೌಢ ಶಾಲೆ ಮೂಡಂಬೈಲ್ ನಲ್ಲಿ ಗೆಳೆಯರ ಬಳಗ (ರಿ) ಬಲ್ಲಂಗುಡೆಲು ಆಯೋಜಿಸಿದ್ದ ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಮತ್ತು ತೇಜಸ್ವಿನಿ ಆಸ್ಪತ್ರೆ ಮಂಗಳೂರು ಜಂಟಿ ಸಹಯೋಗದೊಂದಿಗೆ ನಡೆದ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಹಲವಾರು ಮಂದಿ ಸದುಪಯೋಗ ಪಡೆದುಕೊಂಡರು ಮತ್ತು ನೂರಕ್ಕೂ ಅಧಿಕ ಮಂದಿ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿ ಮಾನವೀಯತೆ ಮೆರೆದರು.

ಬೆಳಿಗ್ಗೆ ಒಂಬತ್ತು ಗಂಟೆಗೆ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಮಂಜೇಶ್ವರದ ಜನಪ್ರಿಯ ಶಾಸಕರಾದ ಎ.ಕೆ.ಎಂ.ಅಶ್ರಪ್ ರವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾ.ಎಂ.ದಾಮೋದರ ಶೆಟ್ಟಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರಾದ ಹರ್ಷದ್ ವರ್ಕಾಡಿ, ಗ್ರಾಮ ಪಂಚಾಯತ್ ಸದಸ್ಯರಾದ ಉಷಾ ಪೂಂಜಾ, ಶಾಲಾ ಮುಖ್ಯೋಪಾಧ್ಯಾಯರಾದ ಸಂಜೀವ ಎಂ,ನಾರಾಯಣ ನಾಯ್ಕ್ ನಡುಹಿತ್ಲು,ರಮೇಶ್ ಸುವರ್ಣ,ಬಳಗದ ಗೌರವ ಅಧ್ಯಕ್ಷರಾದ ರಾಮ್ ಪ್ರಕಾಶ್ ಆಳ್ವ ಪಟ್ಟತ್ತಮೊಗರು,ಅನಂತ ಪದಕಣ್ಣಯ,ಜಯರಾಜ್ ಶೆಟ್ಟಿ ಚಾರ್ಲ,ಅರವಿಂದಕ್ಷ ಭಂಡಾರಿ,ಅಬ್ಬಾಸ್ ಪಮ್ಮಾರ್,ಬಳಗದ ಅಧ್ಯಕ್ಷರಾದ ಕಾರ್ತಿಕ್ ಶೆಟ್ಟಿ ಮಜಿಬೈಲು,ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಬಲ್ಲಂಗುಡೆಲು ಹಾಗೂ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಗದೀಶ್ ಮೂಡಂಬೈಲು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲಾರನ್ನು ಸ್ವಾಗತಿಸಿ,ಬಶೀರ್ ಮೂಡಂಬೈಲು ಧನ್ಯವಾದವಿತ್ತರು.ರಂಗ ಕಲಾವಿದ ದೇವಿಪ್ರಸಾದ್ ಶೆಟ್ಟಿ ಬೆಜ್ಜ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ದುಬೈ