ಮಂಗಳೂರು : ರೋಟರಿ ಕ್ಲಬ್ ಸೆಂಟ್ರಲ್ ಮತ್ತು ನೋಟರೇಟ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ವಂದನಾ ಪ್ರಶಸ್ತಿ 26 27ನ್ನು ಅಕ್ಟೋಬರ್ 30ರಂದು ಸಂಜೆ 7:30ಕ್ಕೆ ಹೋಟೆಲ್ ಸೀ ವ್ಯೂವ್ ಸಭಾಂಗಣದಲ್ಲಿ ಪ್ರದಾನಿಸಲಾಗುವುದು ಎಂದು ಆಯ್ಕೆ ಸಮಿತಿಯ ಸಭಾಪತಿ ಡಾ ದೇವದಾಸ ರೈ ತಿಳಿಸಿದ್ದಾರೆ.
ಪ್ರತಿ ವರ್ಷ ವಂದನ ಪ್ರಶಸ್ತಿಯನ್ನು ಕ್ರೀಡೆ, ವಾಣಿಜ್ಯೋದ್ಯಮ, ಶಿಕ್ಷಣ, ಕಲೆ, ಸಂಗೀತ, ಸಾಹಿತ್ಯ, ವಿಜ್ಞಾನ, ವೃತ್ತಿ ಸೇವೆ ಮತ್ತು ಸಮಾಜ ಸೇವೆಯಲ್ಲಿ ಸಲ್ಲಿಸಿದ ರಾಷ್ಟ್ರಮಟ್ಟದ ಸಾಧನೆಯನ್ನು ಪರಿಗಣಿಸಿ ಸಾಧಕರನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಬಿ ಎನ್ ರವೀಂದ್ರ, ಕಾರ್ಯದರ್ಶಿ ಜಾಕ್ಸನ್ ಸಲ್ದಾನ, ರೋಟರಾಕ್ಟ್ ಅಧ್ಯಕ್ಷ ರಕ್ಷಣಾ, ಕಾರ್ಯದರ್ಶಿ ಮುಖೇಶ್ ಕರ್ಕೇರ, ಮಾಧ್ಯಮ ಸಲಹೆಗಾರ ಎಂ ವಿ ಮಲ್ಯ ಉಪಸ್ಥಿತರಿದ್ದರು.

