
ಶ್ರೀ ನಿವೇದಿತಾ ಪ್ರೌಢಶಾಲೆ ಬಸ್ರೂರು ನಲ್ಲಿ ಕೆನರಾ ಬ್ಯಾಂಕ್ ಆರ್ ಓ ೨ ಉಡುಪಿ,ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್ ಮಣಿಪಾಲ,ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಕುಂದಾಪುರ, ಕುಂದಾಪುರ ತಾಲೂಕು ಕಟ್ಟದ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ)ಬಸ್ರೂರು ಘಟಕ ಹಾಗೂ ನಿವೇದಿತಾ ಪ್ರೌಢಶಾಲೆ ಬಸ್ರೂರು ಇವ ಜಂಟೀ ಸಹಯೋಗದಲ್ಲಿ ಬ್ಯಾಂಕಿಂಗ್ ಯೋಜನೆಗಳ ಮಾಹಿತಿ ನೊಂದಾವಣೆ ಕಾರ್ಯಗಾರ ಮತ್ತು ಕಟ್ಟಡ ಕಾರ್ಮಿಕರ ವಾರ್ಷಿಕ ಮಹಾಸಭೆ ನಡೆಯಿತು.
ಕಟ್ಟಡ ಕಾರ್ಮಿಕರ ಸಂಘದ ವಾರ್ಷಿಕ ಮಹಾಸಭೆಯ ಉದ್ಧಾಟನೆಯನ್ನು ವಿಶೇಷವಾಗಿ ಚಂಡೆ ಭಾರಿಸುವುದರ ಮೂಲಕ ಬಿ.ರಾಮಕಿಶನ್ ಹೆಗ್ಡೆ ಉದ್ಘಾಟಿಸಿ ಶುಭಾಶಯ ಕೋರಿದರು.ಬ್ಯಾಂಕಿಂಗ್ ಮಾಹಿತಿ ಕಾರ್ಯಗಾರದ ದೀಪ ಪ್ರಜ್ವಲಿಸಿ ಪೂರ್ಣಾನಂದ (ಎ.ಜಿ.ಎಮ್. ಉಡುಪಿ)ಉದ್ಘಾಟಿಸಿದರು.ಬ್ಯಾಂಕಿಂಗ್ ಮಾಹಿತಿಯನ್ನು ಆಶಾಲತಾ ಮರವಂತೆ ಮಾಹಿತಿ ನೀಡಿದರು.ಸರಕಾರದ ಅನೇಕ ಯೋಜನೆ ಯೋಚನೆಯ ಬಗ್ಗೆ ರೂಟ್ ಸೆಟ್ ತರಭೇತಿ ಸಂಸ್ಥೆಯ ಮುಖ್ಯಸ್ಥರು ಮಾಹಿತಿ ನೀಡಿದರು. ದಿಕ್ಸೂಚಿ ಭಾಷಣವನ್ನು ಸುರೇಶ್ ಕಲ್ಲಾಗಾರ ದಿಕ್ಸೂಚಿ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಮೋಹನ್ ಕಿಣಿ, ತಿರುಮಲ ಶುಭಾಶಯ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣೇಶ ಸೇರೆಗಾರ್ ವಹಿಸಿದ್ದರು.
ಕಾರ್ಯಕ್ರಮ ನಿರೂಪಣೆಯನ್ನು ಶಶಿಕಾಂತ್ ಎಸ್.ಕೆ.ಧನ್ಯವಾದವನ್ನು ರಾಘವೇಂದ್ರ ಆಚಾರ್ಯ ನಡೆಸಿದರು. ಪ್ರಾರ್ಥನೆಯನ್ನು ಕುಮಾರಿ ಪ್ರಜ್ಞಾ ನಡೆಸಿದರು.
