ಕತ್ತಲ ಹಾದಿ’ ಕಿರುಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆ : ನ.7ರಂದು ಯೂಟ್ಯೂಬ್‌ನಲ್ಲಿ ಸಿನಿಮಾ ಪ್ರದರ್ಶನ

0
12

ಸ್ಥಳೀಯ ಪ್ರತಿಭೆಗಳ ಸಹಯೋಗದಲ್ಲಿ ಮೂಡಿಬಂದಿರುವ ‘ಕತ್ತಲ ಹಾದಿ’ (KATTALA HAADI) ಕನ್ನಡ ಕಿರುಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ. ವಿಭಿನ್ನ ಕಥಾಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವ ಈ ಕಿರುಚಿತ್ರದ ಬಿಡುಗಡೆ ದಿನಾಂಕವನ್ನೂ ಚಿತ್ರತಂಡ ಪ್ರಕಟಿಸಿದೆ.

ಕಿರುಚಿತ್ರಕ್ಕೆ ಚೇತನ್ ರೈ ಪಣಜೆ ಅವರು ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಪವನ್ ರೈ ಪಣಜೆ ಸಹ ನಿರ್ದೇಶನ ಮಾಡಿದ್ದಾರೆ. ರಂಜನ್ ಇಂದಾಜೆ ಅವರು ಛಾಯಾಗ್ರಹಣ ಮತ್ತು ಸಂಕಲನ ನಿರ್ವಹಿಸಿದ್ದು, ಸಂಗೀತ ನಿರ್ದೇಶನವನ್ನು ಚೇತನ್ ರೈ ಅವರೇ ಮಾಡಿದ್ದಾರೆ.

ಚಿತ್ರದಲ್ಲಿ ದೀಪಕ್ ರೈ ಪಣಜೆ, ಅಕ್ಷತಾ ಕೀರ್ತನ್ ರೈ, ಸುದೀಶ್ ರೈ ಕಿಕರ, ಶಶಿಕುಮಾರ್ ರೈ, ಶ್ರೀಧರ್ ಪಾದ್ರೆ, ವಿದ್ಯಾ, ಸಾತ್ವಿಕ್ ರೈ, ಕೃತಿಕ್ ರೈ, ಕಾರ್ತಿಕ್, ಹೃತೇಶ್, ಚಂದ್ರಶೇಖರ್, ಪವನ್, ರಕ್ಷಿತ್ ರೈ, ಬೃಜೇಶ್ ರಾವ್, ನಿತಿನ್ ರಾಜ್, ಅವಿನಾಶ್ ಹಾಗೂ ಕಾಳಿದ್ ಸೇರಿದಂತೆ ಒಟ್ಟು 18 ಕಲಾವಿದರು ಅಭಿನಯಿಸಿದ್ದಾರೆ.

ಈಗಾಗಲೇ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ನವೆಂಬರ್ 7, 2026ರಂದು ಸಂಜೆ 4 ಗಂಟೆಗೆ 3 Brothers Kannada ಯೂಟ್ಯೂಬ್ ಚಾನೆಲ್‌ನಲ್ಲಿ ಕಿರುಚಿತ್ರ ಬಿಡುಗಡೆಯಾಗಲಿದೆ.

ಚಿತ್ರತಂಡವು ಪ್ರೇಕ್ಷಕರ ಪ್ರೀತಿ, ಪ್ರೋತ್ಸಾಹ ಹಾಗೂ ಬೆಂಬಲವನ್ನು ಕೋರಿದೆ.