ಗೋಳಿಕಟ್ಟೆ ಅಲ್-ಫಲಾಹ್ ಜುಮ್ಮಾ ಮಸೀದಿ ನೂತನ ಉದ್ಘಾಟನೆ : ಭವ್ಯ ಸೌಹಾರ್ದ ಸಂಗಮ ಕಾರ್ಯಕ್ರಮ ಸಂಭ್ರಮದಿಂದ ಸಂಪನ್ನ

0
11

ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಜನಪ್ರಿಯ ನಾಯಕ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರಿಗೆ ಅದ್ದೂರಿ ನಾಗರಿಕ ಸನ್ಮಾನ ಇಂದು ನಡೆಯಿತು.

ಬ್ರಹ್ಮಾವರ : ಹಾವಂಜೆ ಗೋಳಿಕಟ್ಟೆಯ ಇತಿಹಾಸ ಪ್ರಸಿದ್ಧ ಅಲ್-ಫಲಾಹ್ ಜುಮ್ಮಾ ಮಸೀದಿಯ ನೂತನ ಸುಸಜ್ಜಿತ ಕಟ್ಟಡದ ಭವ್ಯ ಉದ್ಘಾಟನಾ ಸಮಾರಂಭ, ಸಾರ್ವಜನಿಕ ಮಸೀದಿ ಸಂದರ್ಶನ ಮತ್ತು ಸರ್ವಧರ್ಮಗಳ ಸೌಹಾರ್ದತೆಯ ಸಂದೇಶ ಸಾರುವ ಸೌಹಾರ್ದ ಸಂಗಮ ಕಾರ್ಯಕ್ರಮವು ದಿನಾಂಕ -04 ನವೆಂಬರ್ 2026 ಬುಧವಾರ ದಂದು ಅತ್ಯಂತ ಭಕ್ತಿಪೂರ್ವಕ, ಸಂಭ್ರಮ ಹಾಗೂ ಭಾವೈಕ್ಯತೆಯ ವಾತಾವರಣದಲ್ಲಿ ವಿಜೃಂಭಣೆಯಿಂದ ಜರುಗಿತು.

ಈ ಕಾರ್ಯಕ್ರಮದ ಅತ್ಯಂತ ಆಕರ್ಷಣೀಯ ಘಟ್ಟವಾದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ತುಳುನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಯ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ, ಬಡವರ, ಶೋಷಿತರ ಪರವಾಗಿ ನಿರಂತರವಾಗಿ ಧ್ವನಿಯಾಗುತ್ತಿರುವ, ಸರ್ವರಿಗೂ ಪ್ರಿಯರಾದ ತುಳುನಾಡ ರಕ್ಷಣಾ ವೇದಿಕೆ (ರಿ) ಉಡುಪಿ ಜಿಲ್ಲಾ ಘಟಕದ ಕ್ರಿಯಾಶೀಲ ಜಿಲ್ಲಾಧ್ಯಕ್ಷರಾದ _ಸನ್ಮಾನ್ಯ ಶ್ರೀ ಫ್ರ್ಯಾಂಕಿ ಡಿಸೋಜ ರವರು ಶ್ರೀ ಶ್ರೀ ಈಶ ವಿಠಲ ದಾಸ ಸ್ವಾಮೀಜಿ ಶ್ರೀ ಕ್ಷೇತ್ರ ಕೇಮಾರು ಮಠ, ವಿ. ರೆ ಫಾದರ್ ಡೆನಿಸ್ ಅಲೆಕ್ಸಾಂಡರ್ ಡೆಸ್, ಡಾಕ್ಟರ್ ಅಬ್ದುಲ್ ರಶೀದ್ ಹಾಗೂ ಮಾಜಿ ಸಚಿವರು ಮಾಜಿ ಸಂಸದರು ಆದ ಜಯಪ್ರಕಾಶ್ ಹೆಗಡೆ ಹಾಗೂ ವಿವಿಧ ದೇವಾಲಯಗಳ ಧರ್ಮದರ್ಶಿಗಳು, ಸಮ್ಮುಖದಲ್ಲಿ ಭವ್ಯ ನಾಗರಿಕ ಸನ್ಮಾನಕ್ಕೆ ಭಾಜನರಾದರು.

ಸಮಾಜದಲ್ಲಿ ಜಾತಿ, ಧರ್ಮ, ಭೇದ ಮರೆತು ಸೌಹಾರ್ದತೆ, ಶಾಂತಿ, ಕೋಮು ಸೌಹಾರ್ದತೆ, ಭಾವೈಕ್ಯತೆಯನ್ನು ಬೆಸೆಯುವಲ್ಲಿ ಮತ್ತು ನಿರಂತರ ಸಾಮಾಜಿಕ ಸೇವೆ, ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರ ನಿಸ್ವಾರ್ಥ, ಪ್ರಾಮಾಣಿಕ, ದಿಟ್ಟ ಹೋರಾಟದ ಸೇವೆಯನ್ನು ಗುರುತಿಸಿ ಅಲ್-ಫಲಾಹ್ ಜುಮ್ಮಾ ಮಸೀದಿ ಆಡಳಿತ ಸಮಿತಿ, ಅಲ್-ಫಲಾಹ್ ಯಂಗ್ ಮೆನ್ಸ್ ಅಸೋಸಿಯೇಷನ್, ಹಿದಾಯತುಲ್ ದಫ್ ಕಮಿಟಿ ಹಾಗೂ ಸ್ವಲಾತ್ ಕಮಿಟಿ ವತಿಯಿಂದ ಅತ್ಯಂತ ಆತ್ಮೀಯವಾಗಿ ಗೌರವಪೂರ್ವಕವಾಗಿ ಈ ಪ್ರಶಸ್ತಿ ಪುರಸ್ಕಾರದ ಸನ್ಮಾನ ನೀಡಿ ಗೌರವಿಸಲಾಯಿತು.

ಈ ಪವಿತ್ರ ವೇದಿಕೆಯಲ್ಲಿ ಪದ್ಮಶ್ರೀ ಪುರಸ್ಕೃತ ಕಿತ್ತಳೆ ಹಣ್ಣಿನ ವ್ಯಾಪಾರಿ ಸಂತ ಹರೇಕಳ ಹಾಜಬ್ಬ ಹಾಗೂ ಮಾನವೀಯತೆಯ ಸಂತ ರವಿ ಕಟಪಾಡಿ ರವರಿಗೂ ಅತ್ಯಂತ ಗೌರವಯುತವಾಗಿ ನಾಗರಿಕ ಸನ್ಮಾನ ನೀಡಿ ಗೌರವಿಸಲಾಯಿತು. ಇದರ ಜೊತೆಗೆ ಹಲವು ಗಣ್ಯಮಾನ್ಯರಿಗೆ, ದಾನಿಗಳಿಗೆ, ಸಮಾಜ ಸೇವಕರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು.

ಈ ಭವ್ಯ ಸಮಾರಂಭದಲ್ಲಿ ಮಸೀದಿಯ ಅಧ್ಯಕ್ಷರು, ಎಲ್ಲಾ ಪದಾಧಿಕಾರಿಗಳು, ಗೋಳಿಕಟ್ಟೆಯ ಸರ್ವ ಸದಸ್ಯರು, ವಿವಿಧ ಧರ್ಮಗಳ ಧರ್ಮಗುರುಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಈ ಕಾರ್ಯಕ್ರಮದಲ್ಲಿ ಸಭೆ ಯನ್ನು ಉದ್ದೇಶಸಿ ಮಾತನಾಡಿದ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಸಮಾಜದಲ್ಲಿ ಸಾಮರಸ್ಯ ಪ್ರೀತಿ, ವಿಶ್ವಾಸ, ಸೋದರತ್ವದ ಬಗ್ಗೆ ಮಾತನಾಡಿ ಈ ಸಮಾಜದಲ್ಲಿ ಶಾಂತಿ ನೆಲಸಲಿ ಎಂದು ಹಾರೈಸಿದರು. ಈ ಸನ್ಮಾನವು ನನಗೆ ಸಲ್ಲಿದ ವೈಯಕ್ತಿಕ ಗೌರವವಲ್ಲ, ಇದು ತುಳುನಾಡ ರಕ್ಷಣಾ ವೇದಿಕೆಯ ಪ್ರತಿಯೊಬ್ಬ ನಿಷ್ಠಾವಂತ ಕಾರ್ಯಕರ್ತನಿಗೇ ಸಂದ ಗೌರವ. ನಿಮ್ಮ ಈ ಪ್ರೀತಿ, ವಿಶ್ವಾಸಕ್ಕೆ ನಾನು ಸದಾ ಚಿರಋಣಿ ಎಂದು ಸನ್ಮಾನಿತ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರು ನುಡಿದರು.