ಕಾಶಿಪಟ್ಣ ಸರಕಾರಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ

0
4

ಮೂಡುಬಿದಿರೆ ತಾಲೂಕಿನ ಕೇಳ -ಕಾಶಿಪಟ್ಣ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ನವೆಂಬರ್ 5 ರಂದು ನೀಡಲಾಯಿತು. ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಹಿರಿಯ ಪತ್ರಕರ್ತ ರಾಯಿ ರಾಜಕುಮಾರ ಮೂಡುಬಿದಿರೆ ಅವರು ವಿದ್ಯಾರ್ಥಿಗಳಿಗೆ ಗ್ರಾಮೀಣ ಶಾಲೆ, ಕಾಲೇಜುಗಳಲ್ಲಿಯೇ ಕಲಿಯುವುದರಿಂದ ಉನ್ನತ ವ್ಯಾಸಂಗ ಹಾಗೂ ಉದ್ಯೋಗ ಸಂದರ್ಭದಲ್ಲಿ ದೊರಕುವ ಕೃಪಾಂಕ, ಕನ್ನಡ ಮಾಧ್ಯಮದ, ಸರಕಾರಿ ಶಾಲೆಗಳಿಂದ ದೊರಕುವ ಪ್ರಯೋಜನಗಳ ಸಮಗ್ರ ಮಾಹಿತಿಯನ್ನು ನೀಡಿದರು. ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

ಶಿಕ್ಷಕರುಗಳಾದ ವಸುಧಾ ಸ್ವಾಗತಿಸಿದರು. ಪ್ರತಿಮಾ, ವಿನಿತಾ ಮರಿಯಾ, ಪ್ರಿಯಾ ಕಾರ್ಯಕ್ರಮ ಸಂಘಟಿಸಿದ್ದರು. ಚೇತನ್ ಪಾಂಡರರ್ ವಂದಿಸಿದರು.
.