
ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ಹಳೆಯಂಗಡಿ ಇಲ್ಲಿ ದಿನಾಂಕ: 09.12.2026ರಿಂದ 16.12.2026ರ ವರೆಗೆ ನಡೆಯಲಿರುವ ಷಷ್ಠಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಪ್ರಧಾನ ಅರ್ಚಕರಾದ ಟಿ. ಕೆ ಮಧುಸೂಧನ್ ಆಚಾರ್ ಇವರು ದೇವರಲ್ಲಿ ಪ್ರಾರ್ಥಿಸಿ ಷಷ್ಟಿ ಮಹೋತ್ಸವ ನಿರ್ವಿಘ್ನವಾಗಿ ನೆರವೇರಲಿ ಎಂದು ಶುಭ ಹಾರೈಸಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಗುರುರಾಜ್ ಎಸ್ ಪೂಜಾರಿ ಇವರಿಗೆ ಹಸ್ತಾಂತರಿಸಿ ಬಿಡುಗಡೆಗೊಳಿಸಿ, ಭಕ್ತರ ,ಗ್ರಾಮಸ್ಥರ, ಸಂಘ ಸಂಸ್ಥೆಗಳ ಸಹಕಾರ ಅಗತ್ಯ, ಪ್ರತಿದಿನ ಧಾರ್ಮಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ, ನಡೆಯಲಿದೆ ಎಂದರು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪುರುಷೋತ್ತಮ ಕೋಟ್ಯಾನ್, ಸಂಪತ್ ಜೆ. ಶೆಟ್ಟಿ ತೋಕೂರುಗುತ್ತು, ಅಶೋಕ್ ಕುಂದರ್, ವಿಶ್ವನಾಥ್, ಸವಿತಾ ಶರತ್ ಬೆಳ್ಳಾಯರು, ಶೋಭಾ ವಿ. ಅಂಚನ್, ಮದ್ದೇರಿ ದೈವಸ್ಥಾನದ ಅಧ್ಯಕ್ಷರಾದ ತೋಕೂರು ಗುತ್ತು ಹೊಸಮನೆ ಹರಿಪ್ರಸಾದ್ ಜಿ. ಶೆಟ್ಟಿ, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಭಕ್ತರು ,ಗ್ರಾಮಸ್ಥರು, ಉಪಸ್ಥಿತರಿದ್ದರು.

