ಮುಲ್ಕಿ : ಬಿಜೆಪಿಯ ಮುಲ್ಕಿ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ರಾಜ್ಯದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನಜಾಗೃತಿ ಆಂದೋಲನ
ಹಾಗೂ ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ” ಪಾದಯಾತ್ರೆ “ನಮ್ಮ ಹಕ್ಕು ನಮಗೆ ನೀಡಿ” ಪ್ರತಿಭಟನಾ ಸಭೆ ಅಂಗವಾಗಿ ಮುಲ್ಕಿ ಶಿವಾಜಿ ಮಂಟಪದಿಂದ ಕಾರ್ನಾಡಿನವರೆಗೆ ಬೃಹತ್ ಪಾದಯಾತ್ರೆ ನಡೆಯಿತು.
ಪ್ರತಿಭಟನೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಭಾಗವಹಿಸಿದ್ದರು.
ಪಾದಯಾತ್ರೆಯ ಸಮಾರೋಪದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಪಿಕ್ ಪಾಕೆಟ್ ಸರಕಾರ ಆಡಳಿತ ನಡೆಸುತ್ತಿದ್ದು ಬೆಲೆ ಏರಿಕೆ ಲಂಚಗುಳಿತನ ದಲಿತರ ಹಣನುಂಗಿದ ಕಾಂಗ್ರೆಸ್ ಸರಕಾರವನ್ನು ತೊಲಗಿಸಬೇಕಾಗಿದೆ ಕಾಂಗ್ರೆಸ್ ಸರಕಾರ ಕಳೆದ ಮೂರೂವರೆ ವರ್ಷದಿಂದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಸತಾಯಿಸುತ್ತಿದೆ . ಇತ್ತೀಚಿನ ದಿನಗಳಲ್ಲಿ ಹಾಲು ಸಹಿತ ಬಸ್ಸು ಟಿಕೆಟ್ ದರ ಏರಿಕೆಯಿಂದ ಮಧ್ಯಮ ವರ್ಗದವರು ಕಂಗಾಲಾಗಿದ್ದು ಮುಂದಿನ ದಿನಗಳಲ್ಲಿ ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ಮಾತನಾಡಿದರು. ಬಿಜೆಪಿ ನಾಯಕರಾದ ಕಸ್ತೂರಿ ಪಂಜ, ಸತೀಶ್ ಅಂಚನ್, ಹರ್ಷರಾಜ ಶೆಟ್ಟಿ, ಸುಭಾಷ್ ಶೆಟ್ಟಿ, ಶೈಲೇಶ್ ಕುಮಾರ್,ರಂಗನಾಥ ಶೆಟ್ಟಿ,ಲಕ್ಷ್ಮಣ್ ಸಾಲ್ಯಾನ್,ನರಸಿಂಹ ಪೂಜಾರಿ, ನವೀನ್ ರಾಜ್, ರಾಧಿಕಾ ಕೋಟ್ಯಾನ್, ದಯಾವತಿ ಅಂಚನ್, ಪುರುಷೋತ್ತಮ ಬಡಗುಹಿತ್ಲು, ದೇವಪ್ರಸಾದ್ ಕೆಂಪುಗುಡ್ಡೆ, ನವೀನ್ ರಾಜ್,ಭಾನುಮತಿ ಶೆಟ್ಟಿ ಕಕ್ವಗುತ್ತು, ಕಿಶೋರ್ ಶೆಟ್ಟಿ ಬಪ್ಪನಾಡು, ಪ್ರಶಾಂತ್ ಕೆ ಶಶಿಕುಮಾರ್ ಕೆಎಸ್ ರಾವ್ ನಗರ,ಮೀನಾಕ್ಷಿ ಬಂಗೇರ, ಸತ್ಯೇಂದ್ರ ಶೆಣೈ, ಉಮೇಶ್ ಮಾನಂಪಾಡಿ, ವಿಜಯ ಮಾನಂಪಾಡಿ, ನರಸಿಂಹ ಪೂಜಾರಿ, ಅಶೋಕ್ ಜನನಿ, ಈರಣ್ಣ ಅರಳಗುಂಡಿ, ರವೀಶ್ ಕಾಮತ್, ಮನೋಹರ ಕೋಟ್ಯಾನ್, ಜೀವನ್ ಶೆಟ್ಟಿ ಅಂಗರಗುಡ್ಡೆ, ಪೂರ್ಣಿಮಾ, ಲೀಲಾ ಬಂಜನ್, ಹರೀಶ್ ಉಡುಪಿ,ರಶ್ಮಿ ಆಚಾರ್ಯ, ಉದಯ ಅಮೀನ್ ಮಟ್ಟು,ಸಾಧು ಅಂಚನ್ ಮಟ್ಟು, ಮತ್ತಿತರರು ಉಪಸ್ಥಿತರಿದ್ದರು.

