ಲಯನ್ಸ್‌ ಕ್ಲಬ್‌ ಬೆಳ್ಮಣಿನಿಂದ ಮೂಳೂರು ಶಾಲಾ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಶಾಂತಿ ಚಿತ್ರ ಸ್ಪರ್ಧೆ‌

0
21

ಲಯನ್ಸ್‌ ಕ್ಮಬ್‌ ಬೆಳ್ಮಣಿನಿಂದ ಮೂಳೂರಿನ Al Ihsan English Medium ಶಾಲೆಯ ವಿದ್ಯಾರ್ಥಿಗಳಿಗಾಗಿ ಜರುಗಿದ ಶಾಂತಿ ಚಿತ್ರ ಸ್ಪರ್ಧೆಯ ಬಹುಮಾನವನ್ನು ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಕ್ಲಬ್ಬಿನ ಕಾರ್ಯದರ್ಶಿ ಲಯನ್‌ ಟೀನಾ ಡೆಸಾ ಶಾಂತಿಯ ಮಹತ್ವ, ಮಾನವೀಯತೆಯ ಮೌಲ್ಯಗಳು ಮತ್ತು ಶಾಂತಿ ಚಿತ್ರದ ಕುರಿತು ವಿವವರಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಕ್ಲಬ್ಬಿನ ಅಧ್ಯಕ್ಷರಾದ ಲಯನ್‌ ಬಿ ಎಚ್‌ ಶಿವರಾಮ ಆಚಾರ್ಯ, ಶಾಲಾ ಮುಖ್ಯೋಪಾಧ್ಯಯರು, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.