‘ಕಣ್ಣನ್ ದೇವನ್ ಗೋಲ್ಡ್’ ಮಾರುಕಟ್ಟೆಗೆ ಬಿಡುಗಡೆ

0
17

ಉಡುಪಿ : ಟಾಟಾ ಟೀ ಕಣ್ಣನ್ ದೇವನ್ ಇದೀಗ ‘ಟಾಟಾ ಟೀ ಕಣ್ಣನ್ ದೇವನ್ ಗೋಲ್ಡ್’ ಚಹಾವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು ಅಸ್ಸಾಂನ ಆಯ್ದ ಚಹಾ ಎಲೆಗಳಿಂದ ತಯಾರಿಸಲಾದ ಒಂದು ಹೊಸ ಉತ್ಕøಷ್ಟ ‘ಅಸ್ಸಾಂ ಚಹಾ ಪುಡಿ’ಯಾಗಿದ್ದು, ಹೆಚ್ಚು ಸಮೃದ್ಧ ಮತ್ತು ಆನಂದದಾಯಕ ಚಹಾ ಅನುಭವ ಬಯಸುವ ಗ್ರಾಹಕರಿಗಾಗಿ ಇದನ್ನು ತಯಾರಿಸಲಾಗಿದೆ.

ಈ ಹೊಸ ಮಿಶ್ರಣವು ಸಮೃದ್ಧ ರುಚಿ, ಆಕರ್ಷಕ ಸುವಾಸನೆ, ತೃಪ್ತಿದಾಯಕ ಸಾಮಥ್ರ್ಯ ಮತ್ತು ಸುಂದರವಾದ ಸುವರ್ಣ ಬಣ್ಣವನ್ನು ಒಳಗೊಂಡಿದ್ದು, ಪ್ರತಿದಿನವೂ ಒಂದು ವಿಶಿಷ್ಟವಾದ ಕಡುವಾದ ಚಹಾ ಅನುಭವ ನೀಡುತ್ತದೆ ಎಂದು ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್‍ನ ಪ್ಯಾಕ್ಡ್ ಬೆವರೇಜಸ್ ಅಂಡ್ ಆಗ್ರ್ಯಾನಿಕ್ ಇಂಡಿಯಾ ಅಧ್ಯಕ್ಷ ಶರತ್ ವರ್ಮಾ ಹೇಳಿದ್ದಾರೆ.

“ನಿಮ್ಮ ಕನಸುಗಳ ರುಚಿಗೆ ಎಚ್ಚರಗೊಳ್ಳಿ” ಎಂಬ ಪರಿಕಲ್ಪನೆಯಡಿ ಬ್ರಾಂಡ್‍ನ ಹೊಸ ಚಿತ್ರ ಕೂಡಾ ಬಿಡುಗಡೆಯಾಗಿದೆ. ‘ಟಾಟಾ ಟೀ ಕಣ್ಣನ್ ದೇವನ್ ಗೋಲ್ಡ್’ ಕರ್ನಾಟಕದಾದ್ಯಂತ 100 ಗ್ರಾಂ ಮತ್ತು 250 ಗ್ರಾಂ ಪ್ಯಾಕ್‍ಗಳಲ್ಲಿ ಲಭ್ಯವಿರಲಿದ್ದು, ಇವುಗಳ ಬೆಲೆ ಕ್ರಮವಾಗಿ 60 ರೂ. ಮತ್ತು 150 ರೂ. ಆಗಿರಲಿದೆ. ಈ ಉತ್ಪನ್ನವು ಆರಂಭದಲ್ಲಿ ಸಾಮಾನ್ಯ ವ್ಯಾಪಾರ ಮಳಿಗೆಗಳಲ್ಲಿ ಸಿಗಲಿದ್ದು, ನಂತರ ಆಧುನಿಕ ವ್ಯಾಪಾರ ಮಳಿಗೆಗಳು ಮತ್ತು ಇ-ಕಾಮರ್ಸ್ ಜಾಲಗಳಿಗೂ ವಿಸ್ತರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.