ನ.14ರಂದು ತುಳುನಾಡಿನ ಜೈನ ಅರಸು ಮನೆತನದ ಇತಿಹಾಸ ಶೋಧದ “ಕೆಲ್ಲಪುತ್ತಿಗೆಯ ಕೆಲ್ಲರು” ಕೃತಿ ಬಿಡುಗಡೆ

0
37

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಡಾ. ಪಿ.ಎನ್. ನರಸಿಂಹ ಮೂರ್ತಿ ಅವರ ‘ಕೆಲ್ಲಪುತ್ತಿಗೆಯ ಕೆಲ್ಲರು – ತುಳುನಾಡಿನ ಜೈನ ಅರಸು ಮನೆತನದ ಇತಿಹಾಸ ಶೋಧ’ ಎಂಬ ಕೃತಿಯ ಬಿಡುಗಡೆ ಕಾರ್ಯಕ್ರಮವು ನ.14ರಂದು ಆಯೋಜಿಸಲಾಗಿದೆ.

ಮಂಗಳೂರು ನಗರದ ಉರ್ವಸ್ಟೋರ್‌ನಲ್ಲಿರುವ ತುಳು ಭವನದಲ್ಲಿ ನವೆಂಬರ್ 14ರ ಶನಿವಾರ ಸಂಜೆ 4.30ಕ್ಕೆ ಕಾರ್ಯಕ್ರಮ ನಡೆಯಲಿದೆ.

ಕೃತಿಯನ್ನು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಡಾ. ತುಕರಾಮ ಪೂಜಾರಿ ಬಿಡುಗಡೆಗೊಳಿಸಿ ಕೃತಿ ಅವಲೋಕನ ಮಾಡಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಕೆಲ್ಲ ವಂಶಸ್ಥರಾದ ಕೆ.ಪಿ. ಜಗದೀಶ ಅಧಿಕಾರಿ ಭಾಗವಹಿಸಲಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಹಾಗೂ ಸದಸ್ಯ ಸಂಚಾಲಕ ಅಕ್ಷಯ ಆರ್. ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದ್ದಾರೆ.