ದುಬೈನಲ್ಲಿ ಕಟೀಲ್ ಫ್ರೆಂಡ್ಸ್ ಕ್ರಿಕೆಟ್ ಟೀಂ ಸೀಸನ್-15ಕ್ಕೆ ಅದ್ಧೂರಿ ಚಾಲನೆ

0
21

ದುಬೈ : ಕಟೀಲ್ ಫ್ರೆಂಡ್ಸ್ ಕ್ರಿಕೆಟ್ ಟೀಂ ದುಬೈ ಯುಎಇಯ ಕ್ರಿಕೆಟ್ ಪ್ರೀಮಿಯರ್ ಲೀಗ್-2026 ಸೀಸನ್ ಹದಿನೈದರ ಜೆರ್ಸಿ ಅನಾವರಣ, ಟ್ರೋಫಿ ಲಾಂಚ್ ಮತ್ತು ಆಟಗಾರರ ಹರಾಜು ಪ್ರಕ್ರಿಯೆ ಕಾರ್ಯಕ್ರಮವು ಇತ್ತೀಚೆಗೆ ನಗರದ ಬಿ ಟೌನ್ ರೆಸ್ಟೋರೆಂಟ್ ನಲ್ಲಿ ಜರುಗಿತು.

ನಡೆದ ಸಭಾ ಕಾರ್ಯಕ್ರಮದಲ್ಲಿ Longmarch ಕಂಪನಿಯ ಆಡಳಿತ ನಿರ್ದೇಶಕರಾದ ಪ್ರಣಯ್ ಮೆಹ್ತಾ,ಸುಶಿಲ್ ಗುಪ್ತಾ, ಸುಶಿಲ್ ಶರ್ಮಾ,Ranger Genral Transport ಕಂಪನಿಯ ಮಾಲೀಕರಾದ ಉದಯ ಶೆಟ್ಟಿ,Barrels Group ನ ಮಾಲೀಕರಾದ ಅಭಿ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿದರು.

ಟೂರ್ನಿಯು ನವೆಂಬರ್ 29ರಂದು ಬೆಳಿಗ್ಗೆ ಹತ್ತು ಗಂಟೆಯಿಂದ ಯುಎಇಯ ಎ ಕೆ ಎಂ ಕ್ರಿಕೆಟ್ ಗ್ರೌಂಡ್ ಉಮ್ಮ್ ಅಲ್ ಕ್ವಿನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.ಈ ಪಂದ್ಯಾಟದಲ್ಲಿ ಯುಎಇಯ ವಿವಿಧ ಭಾಗಗಳ ಕ್ರಿಕೆಟ್ ತಂಡಗಳು ಭಾಗವಹಿಸಲಿದ್ದು ತುಳು ಕನ್ನಡಿಗರ ಕ್ರೀಡಾ ಪ್ರತಿಭೆಗೆ ಉತ್ತಮ ವೇದಿಕೆಯಾಗಲಿದೆ.

ಯುಎಇಯಲ್ಲಿರುವ ತುಳು-ಕನ್ನಡ ಕ್ರಿಕೆಟ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೈದಾನಕ್ಕೆ ಆಗಮಿಸಿ ಪಂದ್ಯಾಟವನ್ನು ವೀಕ್ಷಿಸುವ ಮೂಲಕ ಆಟಗಾರರನ್ನು ಪ್ರೋತ್ಸಾಹಿಸಬೇಕೆಂದು ಕಟೀಲು ಫ್ರೆಂಡ್ಸ್ ಕ್ರಿಕೆಟ್ ಟೀಂ ದುಬೈಯ ಸಂಘಟಕರು ಮನವಿ ಮಾಡಿದ್ದಾರೆ.

ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ದುಬೈ