ಏಕಾಹ ಭಜನಾ ಸುವರ್ಣ ಮಹೋತ್ಸವ

0
12

ಮೂಡುಬಿದಿರೆ ಗುರುಮಠ ಕಾಳಿಕಾಂಬಾ ದೇವಸ್ಥಾನದ ಸನ್ನಿಧಿಯಲ್ಲಿ ಜಗದ್ಗುರುಗಳ ಆಶೀರ್ವಾದದೊಂದಿಗೆ ನವೆಂಬರ್ 15ರಿಂದ 21ರ ತನಕ ಗುರು ಯಜ್ಞ, ದುರ್ಗಾ ಹೋಮ, ಭಜನಾ ದಿಂಡಿ, ಹಾಗೂ ಅಖಂಡ ತ್ರಿದಿನ ಭಜನಾ ಮಹೋತ್ಸವ ನಡೆಯಲಿದೆ.

ನ. 15 ರಂದು ಷಣ್ಣಾರಿ ಕೇಳ ಗಣ್ಯಾಗದೊಂದಿಗೆ ಪ್ರಾರಂಭವಾಗುವ ಕಾರ್ಯಕ್ರಮ ಸಂಜೆ ಭಜನಾ ದಿಂಡಿ, ಮರುದಿನ ಯಜ್ಞಾಂಗ ಜಪ, ನ 17ರಂದು ಗುರು ಯಜ್ಞ, ದುರ್ಗಾ ಹೋಮ, ನ 18ರಂದು ಅಖಂಡ ತ್ರಿದಿನ ಭಜನೆ, ದೀಪಾರಾಧನೆ, ನ 21ರಂದು ಮಂಗಳ ಕಾರ್ಯಕ್ರಮ ನಡೆಯಲಿದೆ ಎಂದು ದೇವಳದ ಆಡಳಿತ ಮುಖ್ಯಸ್ಥರುಗಳು, ಭಜನಾ ಮಂಡಳಿ, ಸೇವಾ ಸಮಿತಿ, ಮಹಿಳಾ ಸಮಿತಿಗಳ ಪ್ರಕಟಣೆ ತಿಳಿಸಿದೆ.

ವರದಿ ರಾಯಿ ರಾಜ ಕುಮಾರ್
.