
ಬಂಟ್ವಾಳ : ಇಲ್ಲಿನ ಬೆಂಜನಪದವು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ದೇರಳಕಟ್ಟೆ ಕೆ.ಎಸ್.ಮೆಡಿಕಲ್ ಕಾಲೇಜಿನಲ್ಲಿ ಬಿ ಎಸ್ಸಿ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡು ಚಿನ್ನದ ಪದಕ ಗಳಿಸಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿನಿ ದಿಶಾ ಬೆಂಜನಪದವು ಇವರನ್ನು ಮಂಗಳವಾರ ಸನ್ಮಾನಿಸಲಾಯಿತು.
ಇಲ್ಲಿನ ನಿವಾಸಿ ಕೇಶವ ಮೇಸ್ತಿç ಮತ್ತು ವಿಮಲ ದಂಪತಿ ಪುತ್ರಿ ದಿಶಾ ಬೆಂಜನಪದವು ಇವರನ್ನು ಬಂಟ್ವಾಳ ಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ಟ್ರಸ್ಟ್ ಅಧ್ಯಕ್ಷ ನವೀನ್ ಕೋಟ್ಯಾನ್, ಮೂಡುಪೆರಾರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಗಂಜಿಮಠ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಮನೋಜ್ ಕನಪಾಡಿ, ನೋಟರಿ ವಕೀಲ ವಿನೋದರ ಪೂಜಾರಿ, ಪ್ರಮುಖರಾದ ನಾರಾಯಣ ಪಲ್ಲಿಕಂಡ, ಅಶೋಕ್, ಜಗದೀಶ್ ಬಂಗೇರ ಕುಂಜತ್ತೂರು ಮತ್ತಿತರರು ಇದ್ದರು.
