
ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ 1 ಕೋಟಿ 10 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಇಂದು ದಿನಾಂಕ 12-11-2026 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.
ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ 7ನೇ ವಾರ್ಡಿನ ಬೋಳಾರಗುಡ್ಡೆ ಮಹಿಳಾ ಮಂಡಲದಿಂದ ನೋಯಲ್ ಕ್ಯಾಸ್ಟಲಿನ್ ಮನೆ ವರೆಗೆ ರಸ್ತೆ ಅಭಿವೃದ್ಧಿ – 20 ಲಕ್ಷ, 11ನೇ ವಾರ್ಡಿನ ಪಿತ್ರೋಡಿ ಕಡವಿನ ಬಾಗಿಲು ರಸ್ತೆ ಅಭಿವೃದ್ಧಿ – 20 ಲಕ್ಷ, 2ನೇ ವಾರ್ಡಿನ ಬೊಳ್ಜೆ ಗರಡಿಯಿಂದ ಹೇಮ ಪೂಜಾರ್ತಿ ಮನೆ ವರೆಗೆ ರಸ್ತೆ ಅಭಿವೃದ್ಧಿ – 20 ಲಕ್ಷ, 10ನೇ ವಾರ್ಡಿನ ಆರೂರು ದೇವಿಪ್ರಸಾದ್ ಅಂಗಡಿಯಿಂದ ನಾಗಬನ ರಸ್ತೆ ಅಭಿವೃದ್ಧಿ – 20 ಲಕ್ಷ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉದ್ಯಾವರ ವೆಸ್ಟ್ ಇದರ 3 ಕೊಠಡಿ ಕಾಮಗಾರಿ ನಿರ್ಮಾಣ – 30 ಲಕ್ಷ ಸೇರಿದಂತೆ ಒಟ್ಟು 1ಕೋಟಿ 10 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ರಾಜ್ಯ ಬಿಜೆಪಿ ಮಾಜಿ ಉಪಾಧ್ಯಕ್ಷರಾದ ನಯನ ಗಣೇಶ್, ಉದ್ಯಾವರ ಮಹಾಶಕ್ತಿ ಕೇಂದ್ರದ ರವಿ ಕೋಟ್ಯಾನ್, ಉದ್ಯಾವರ ಗ್ರಾಮ ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ಶ್ರೀಯಾನ್, ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ರಾಜೇಶ್ ಕುಂದರ್, ಮಾಜಿ ಸದಸ್ಯರಾದ ಸಂತೋಷ್ ಸುವರ್ಣ, ಯೋಗೀಶ್, ಮಿಥೇಶ್, ಪ್ರಮೀಳಾ, ರೇಖಾ ಶಂಕರ್, ಸರೋಜಾ, ವಾರಿಜಾ, ಉಮೇಶ್ ಕರ್ಕೇರ, ವಿಜಯ್ ಕುಮಾರ್, ಸಚಿನ್, ವಿನೋದ್, ಸತೀಶ್ ಪೂಜಾರಿ ಹಾಗೂ ಪಕ್ಷದ ಹಿರಿಯರು, ಪ್ರಮುಖರು, ಕಾರ್ಯಕರ್ತರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
