ಉಡುಪಿ : ಸ್ಕೌಟ್ಸ್ ಗೈಡ್ಸ್ ಸಪ್ತಾಹದ ಅಂಗವಾಗಿ ಉಡುಪಿ ನಗರದಲ್ಲಿ ಬೈಕ್ ರ್‍ಯಾಲಿ

0
19

ಜಿಲ್ಲಾ ಮುಖ್ಯ ಆಯುಕ್ತರಾದ ಇಂದ್ರಾಳಿ ಜಯಕರ್ ಶೆಟ್ಟಿ ಇವರ ನೇತೃತ್ವದಲ್ಲಿ ಜಿಲ್ಲಾ ಸಂಸ್ಥೆಯಲ್ಲಿ ಸಂಸ್ಥಾಪನಾ ದಿನ ಹಾಗೂ ಧ್ವಜ ದಿನಾಚರಣೆ ಮತ್ತು ಸ್ಕೌಟ್ಸ್ ಗೈಡ್ಸ್ ಸಪ್ತಾಹದ ಅಂಗವಾಗಿ ಬೈಕ್ ರ್‍ಯಾಲಿಯನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾಗಿರುವ ಹರಿರಾಮ್ ಶಂಕರ್ ಇವರು ಧ್ವಜ ಚೀಟಿಯನ್ನು ಅನಾವರಣಗೊಳಿಸಿ, ಬೈಕ್ ರ್‍ಯಾಲಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯ ಆಯುಕ್ತರಾದ ಇಂದ್ರಾಳಿ ಜಯಕರ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಆನಂದ್ ಬಿ ಅಡಿಗ, ಜಿಲ್ಲಾ ತರಬೇತಿ ಆಯುಕ್ತರಾದ ಉದಯ್ ಭಾಸ್ಕರ್ ಶೆಟ್ಟಿ, ರೋವರ್ ಇನ್ ಚಾರ್ಜ್ ಆಗಿರುವ ಡಾ. ಗಣನಾಥ್ ಎಕ್ಕಾರ್,ಆರ್ ಎಸ್ ಎಲ್ ಆಗಿರುವ ರಾಘವೇಂದ್ರ ನಾಯಕ್, ಉಡುಪಿ ಸ್ಥಳೀಯ ಸಂಸ್ಥೆಯ ಖಜಾಂಚಿ ರಮೇಶ ಅಂಬಾಡಿ, ಕಮಲಾ ಬಾಯಿ ಹೈಸ್ಕೂಲಿನ ಮುಖ್ಯೋಪಾಧ್ಯಾಯರು, ಹಾಗೂ ಸೀನಿಯರ್ ರೋವರ್ ರೇಂಜರ್ಸ್ ಉಪಸ್ಥಿತರಿದ್ದು ಸುಮನ್ ಶೇಖರ್ ರಾಜ್ಯ ಸಹಾಯಕ ಸಂಘಟನಾ ಆಯುಕ್ತರು ಕಾರ್ಯಕ್ರಮವನ್ನು ಸಂಘಟಿಸಿದ್ದರು.