80 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ

0
13

ಕಾಪು ವಿಧಾನಸಭಾ ಕ್ಷೇತ್ರದ ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ 80 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಇಂದು ದಿನಾಂಕ 12-11-2026 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡಬೆಟ್ಟು ಗ್ರಾಮ ಪೊಸಾರು ರಸ್ತೆ ಅಭಿವೃದ್ಧಿ – 20 ಲಕ್ಷ, ಕೃಷ್ಣ ಭಂಡಾರಿಯವರ ಮನೆ ಬಳಿ ಅಡ್ಡಗಳ ಅಭಿವೃದ್ಧಿ – 20 ಲಕ್ಷ, ಶಂಕರಪುರ ಹಿತ್ಲು ಹೌಸ್ ರಸ್ತೆ ಅಭಿವೃದ್ಧಿ – 20 ಲಕ್ಷ, ಏಣಗುಡ್ಡೆ ದುರ್ಗಾನಗರ ಪ್ರಮೋದ್ ಪೂಜಾರಿ ಮನೆ ಬಳಿಯ ರಸ್ತೆ ಅಭಿವೃದ್ಧಿ – 10 ಲಕ್ಷ, ಅಚ್ಚಡ ಸಲ್ಫಾ ಲೇ ಔಟ್ 2ನೇ ಅಡ್ಡರಸ್ತೆ ಅಭಿವೃದ್ಧಿ – 10 ಲಕ್ಷ ಸೇರಿದಂತೆ ಒಟ್ಟು 80 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಗೀತಾಂಜಲಿ ಸುವರ್ಣ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ನಾಗೇಶ್ ಪೂಜಾರಿ, ಕಟಪಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಅಶೋಕ್ ರಾವ್, ಶ್ರೀನಿವಾಸ್ ಕಿಣಿ, ರಾಜೇಶ್ ಪೂಜಾರಿ, ಕವಿತಾ ಸುವರ್ಣ, ಸುಮತಿ ಸೇರ್ವೆಗಾರ್ ಪವಿತ್ರ ಆರ್ ಶೆಟ್ಟಿ, ಸುಧಾ ಶೆಟ್ಟಿ, ಬೂತ್ ಅಧ್ಯಕ್ಷರಾದ ವಸಂತ ದೇವಾಡಿಗ, ದೀಪಕ್ ಪೂಜಾರಿ, ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಅಭಿರಾಜ್ ಸುವರ್ಣ, ಮೂಡಬೆಟ್ಟು ಶಕ್ತಿ ಕೇಂದ್ರದ ಪ್ರಮುಖ್ ನಿತೀನ್ ವಿ ಸೇರ್ವೆಗಾರ್, ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೆಸರರಾದ ಮಟ್ಟಾರು ದೀನೇಶ್ ಕಿಣಿ, ಪ್ರಮುಖರಾದ ಮುರಳೀಧರ ಪೈ, ಯೋಗೀಶ್ ಕುಮಾರ್, ರೋಶನ್ ಕಾಸ್ತಲಿನೋ, ಶ್ರೀನಿವಾಸ ಶಣೈ, ವೆಂಕಟರಮಣ ಭಟ್, ಅಚ್ಚಡ ಬಡಗುಮನೆ ಶ್ರೀನಿವಾಸ ಶೆಟ್ಟಿ, ಹರೀಶ್ ಪೂಜಾರಿ, ಪೊಂಕ್ರ ಪೂಜಾರಿ ಪೊಸಾರು, ಚಂದ್ರಶೇಖರ ಆಚಾರ್ಯ, ಮಂಜುನಾಥ ಪೂಜಾರಿ, ಬ್ಲಾಂಜ್ ಕರ್ನೇಲಿಯೋ, ಕೆ.ಪಿ ಈಶ್ವರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.