ಅಪಾಯದ ಹಂತದಲ್ಲಿರುವ ವಿದ್ಯುತ್ ಕಂಬ ಬದಲಾಯಿಸಲು ಹೆಚ್.ಶಿವರಾಮೇಗೌಡರ ಬಣದ ಕ.ರ.ವೇ. ಪದಾಧಿಕಾರಿಗಳು ಒತ್ತಾಯ

0
11

ಕುಶಾಲನಗರ : ಸೋಮೇಶ್ವರ ದೇವಸ್ಥಾನದ ಮುಖ್ಯರಸ್ತೆಯಲ್ಲಿ ಶಿವಣ್ಣ ಅವರ ಬ್ಯಾಟರಿ ಅಂಗಡಿಯ ಮುಂಭಾಗದ ವಿದ್ಯುತ್ ಕಂಬ ಬೀಳುವ ಅಪಾಯದ ಹಂತದಲ್ಲಿದ್ದು ಹಾಗೂ ಸಾರ್ವಜನಿಕರ ದೂರಿನ ಮೇರೆಗೆ ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗೆ ಸ್ಥಳಕ್ಕೆ ಬರುವಂತೆ ಸೂಚಿಸಿ ಕಂಬ ಬದಲಾಯಿಸುವಂತೆ ಮನವಿ ಮಾಡಿದರು.

ಅದಕ್ಕೆ ಸ್ಪಂದಿಸಿದ ಅಧಿಕಾರಿ ಒಂದು ವಾರದೊಳಗೆ ವಿದ್ಯುತ್ ಕಂಬವನ್ನು ಬದಲಾಯಿಸುವ ಭರವಸೆ ನೀಡಿದ್ದಾರೆ ಇಲ್ಲದೆ ಹೋದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಚಕ್ತಿ ನಿಗಮ ಮಂಡಳಿ ಕುಶಾಲನಗರದ ಕಚೇರಿಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಕ.ರವೇ.ಪದಾದಿಕಾರಿಗಳು ಎಚ್ಚರಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಬಿ.ಎ ದಿನೇಶ್ ಶೆಟ್ಟಿ ,ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು,ಕೆ. ಚಂದ್ರು,ಮಹಿಳಾ ತಾಲ್ಲೂಕು ಗೌರವಾಧ್ಯಕ್ಷರು, ಪುಟ್ಟಮ್ಮ, ತಾಲ್ಲೂಕು ಅಧ್ಯಕ್ಷರು ಪುಟ್ಟಸ್ವಾಮಿ, ತಾಲ್ಲೂಕು ಉಪಾಧ್ಯಕ್ಷರು ರಂಗಸ್ವಾಮಿ,ಜಿಲ್ಲಾ ಮಹಿಳಾ ಸಹಕಾರ್ಯದರ್ಶಿ ಪ್ರೇಮ, ಜಿಲ್ಲಾ ಕಾರ್ಯದರ್ಶಿ ಎಂ.ಎಸ್ ಸತೀಶ್ ಕುಮಾರ್, ಸಂಘಟನೆ ಕಾರ್ಯದರ್ಶಿ ಕಾರ್ತಿಕ್ , ಮೀನಾಕ್ಷಿ, ಹಾಗೂ ಮುಂತಾದವರು ಭಾಗವಹಿಸಿದ್ದರು.

ವರದಿ : ಪ್ರಿತುನ್ ಪೂವಣ್ಣ