ಮೆಕ್ಯಾನಿಕಲ್ ಇಂಜಿನಿಯರ್ ಆಗಿ ದೇಶದ ಪ್ರತಿಷ್ಠಿತ ಚೆನೈ ಐ ಐ ಟಿ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡಿ ತದ ನಂತರ ಡಾಕ್ಟರೇಟ್ ಪಡೆದು ತನ್ನ ಸಂಶೋದನೆಗಾಗಿ ಅಂತರಾಷ್ಟ್ರೀಯ ಪೆಂಡೆಂಟ್ ಗಳಿಸಿದ ಬೆಳ್ಮಣಿನ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಪ್ರತಿಭಾವಂತ ಯುವಕ ಡಾ. ಅಜಿತ್ ಜೋಗಿಯವರನ್ನು ಲಯನ್ಸ್ ಕ್ಲಬ್ ಬೆಳ್ಮಣಿನ ವತಿಯಿಂದ ಸಾರ್ವಜನಿಕವಾಗಿ ಅಭಿನಂದಿಸಲಾಯಿತು.

ಡಾ. ಅಜಿತ್ ಜೋಗಿರವರ ಕಾರ್ಯ ಕ್ಷಮತೆಯನ್ನ, ಕಠಿಣ ಪರಿಶ್ರಮವನ್ನ, ಯಶಸ್ವಿನ ಪಥವನ್ನು ಮಾಜಿ ಜಿಲ್ಲಾ ಗವರ್ನರ್ ಲಯನ್ ಎನ್ ಎಮ್ ಹೆಗಡೆ ವಿವರಿಸಿದರು. ಮುಖ್ಯ ಅತಿಥಿಗಳಾಗಿ ವಲಯಾಧ್ಯಕ್ಷರಾದ ಲಯನ್ ಡಾ. ಮನೋಜ್ ಕುಮಾರ್ ಶೆಟ್ಟಿ, ಲಯನ್ಸ್ ಜಿಲ್ಲಾ ಸಂಯೋಜಕರಾದ ಲಯನ್ ವರುಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಸಭಾಧ್ಯಕ್ಷತೆಯನ್ನು ಲಯನ್ ಬಿ ಎಚ್ ಶಿವರಾಮ ಆಚಾರ್ಯ ವಹಿಸಿದರು. ಲಯನ್ ಜಯಪ್ರಕಾಶ್ ಶೆಟ್ಟಿ ಮತ್ತು ಲಯನ್ ಟೀನಾ ಡೆಸಾ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು. ಕಾರ್ಯಕ್ರಮದಲ್ಲಿ ಹಲವಾರು ಲಯನ್ಸ್ ಗಣ್ಯರು, ಊರ ನಾಗರಿಕರು ಮತ್ತು ಡಾ. ಅಜಿತ್ ಜೋಗಿಯವರ ಕುಟುಂಬ ವರ್ಗದವರು ಭಾಗವಹಿಸಿದ್ದರು.

