
ಬದಿಯಡ್ಕ: ಬದಿಯಡ್ಕ ಪ್ರದೇಶದ ಅತ್ಯಂತ ಎತ್ತರದ ಹಾಗೂ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಸುಂದರ ಪರಿಸರದಲ್ಲಿ ನೂತನ ಶಬರಿಗಿರಿ ಮಂದಿರ ನಿರ್ಮಾಣಗೊಳ್ಳುತ್ತಿರುವುದು ಅತ್ಯಂತ ಸಂತೋಷದ ಹಾಗೂ ಶ್ಲಾಘನೀಯ ಕಾರ್ಯವಾಗಿದೆ ಎಂದು ಉದ್ಯಮಿ ಶಿವಶಂಕರ ಹೇಳಿದರು.
ಮಂದಿರ ನಿರ್ಮಾಣವಾಗುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಿದ ಅವರು, ಪ್ರಕೃತಿಯ ಮಡಿಲಲ್ಲಿ ಆಧ್ಯಾತ್ಮಿಕ ವಾತಾವರಣವನ್ನು ಹೊಂದಿರುವ ಈ ಸ್ಥಳವು ಭಕ್ತರ ಪಾಲಿಗೆ ವಿಶೇಷ ಆಕರ್ಷಣೆಯ ಕೇಂದ್ರವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಇಂತಹ ಪುಣ್ಯ ಕಾರ್ಯಗಳು ಧಾರ್ಮಿಕ ಭಾವನೆಗಳನ್ನು ಬಲಪಡಿಸುವುದರ ಜೊತೆಗೆ ಸಮಾಜದಲ್ಲಿ ಭಕ್ತಿ, ಶಾಂತಿ, ಸೌಹಾರ್ದತೆ ಹಾಗೂ ಒಗ್ಗಟ್ಟಿನ ಮನೋಭಾವವನ್ನು ಬೆಳೆಸಲು ಸಹಕಾರಿಯಾಗುತ್ತವೆ. ಶಬರಿಗಿರಿಯ ಹೆಸರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಮಂದಿರವು ಮುಂದಿನ ದಿನಗಳಲ್ಲಿ ಭಕ್ತಾದಿಗಳಿಗೆ ಪವಿತ್ರ ಧಾರ್ಮಿಕ ಕ್ಷೇತ್ರವಾಗಿ ರೂಪುಗೊಳ್ಳಲಿ. ಮಂದಿರ ನಿರ್ಮಾಣದ ಈ ಮಹತ್ಕಾರ್ಯಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲ ದೊರೆಯಲಿ ಎಂದು ಅವರು ಆಶಿಸಿದರು.
ಈ ಸಂದರ್ಭದಲ್ಲಿ ಮಂದಿರದ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರಾಜೇಶ್ ಮಾಸ್ಟರ್ – ಚಂಬಲ್ತಿಮಾರ್ ,ನಾರಾಯಣ ವಿದ್ಯಾಗಿರಿ,ಉಮೇಶ್ ಕೆಡೆಂಜಿ, ಕೃಷ್ಣ ಚುಳ್ಳಿಕಾನ,ಗಿರೀಶ್ ಮುಡಿಪಿನಡ್ಕ,ಪ್ರತೀಕ್ ಆಳ್ವ ಪೆರಡಾಲ,ದೇವದಾಸ್ ಕಾಮತ್,ನರೇಂದ್ರ ಬಿ.ಎನ್., ಗುರುಪ್ರಸಾದ್ ರೈ ಕೆ ಮುಂತಾದವರು ಉಪಸ್ಥಿತರಿದ್ದರು. ಡಿಸೆಂಬರ್ ನಾಲ್ಕರಿಂದ (4) ಆರಂಭಗೊಂಡು ಆರರವರೆಗೆ( 6)ಪುನರ್ ಪ್ರತಿಷ್ಠ ಕಲಶೋತ್ಸವ ಹಾಗೂ ಅಯ್ಯಪ್ಪ ತಿರುವಿಲಕ್ ಜರಗಲಿದೆ.
