ನಾಡಿಗೆ ಬಂದಿರುವ ಸಂಕಷ್ಟ ದೂರ ಮಾಡಲು ಕೊಲ್ಲೂರಿನಲ್ಲಿ ವಿಶೇಷ ಪೂಜೆ : ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿಕೆ

0
7

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ನಾಡಿಗೆ ಬಂದಿರುವ ಸಂಕಷ್ಟ, ಬರಗಾಲ ಪರಿಹರಿಸುವ ಸಲುವಾಗಿ ಪೂಜೆ ಸಲ್ಲಿಸಿದ್ದೇನೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಳ ವರ್ಷದ ಬಳಿಕ ಉಡುಪಿಯಲ್ಲಿ ನಿಮ್ಮೊಂದಿಗೆ ಮಾತನಾಡುತ್ತಿದ್ಧೇನೆ, ಕರಾವಳಿ ಎಂದರೆ ಅದು ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರಗಳ ಸಂಗಮ,ನಮ್ಮ ಕುಟುಂಬ ದೇವರನ್ನೆ ನಂಬಿಕೊಂಡಿರುವ ಕುಟುಂಬ,ಹೀಗಾಗಿ ನಾಡಿಗೆ ಬಂದಿರುವ ಸಂಕಷ್ಟ, ಬರಗಾಲ ಪರಿಹರಿಸುವ ಸಲುವಾಗಿ ಪೂಜೆ ಸಲ್ಲಿಸಿದ್ದೇನೆ ಎಂದರು .

ರಾಜ್ಯದಲ್ಲಿರುವ ಸರಕಾರ ಮೂರುವರೆ ವರ್ಷ ಪೂರ್ಣ ಗೊಳಿಸಿದೆ, ಸಾಧನೆಗಳನ್ನು ಚರ್ಚೆ ಮಾಡಲು ಯಾವುದೇ ವಿಚಾರಗಳಿಲ್ಲ,ನುಡಿದಂತೆ ನಡೆದಿದ್ದೇವೆ ಎಂದು 5 ಗ್ಯಾರಂಟಿ ತಂದು ರಾಜ್ಯಕ್ಕೆ ನೀಡಿದ್ದಾರೆ.5 ಗ್ಯಾರಂಟಿ ನೀಡಲು ರಾಜ್ಯ ಸರಕಾರದ ಕೊಡುಗೆ ಏನು ? ಈ ಹೊರೆ ಯಾರ ಮೇಲೆ ಹಾಕುತ್ತಿದ್ದಾರೆ.ರಾಜ್ಯದ ಜನರು ದುಡಿಮೆಯಿಂದ ರಾಜ್ಯದ ಖಜಾನೆಗೆ ತೆರಿಗೆ ಮೂಲಕ ತುಂಬಿಸುತ್ತಾರೆ.ಹಾಗಾಗಿ ಜನರ ಕೊಡುಗೆ ದೊಡ್ಡದು,ರಾಜ್ಯದ ಸಿಎಂ ಡಿಸಿಎಂ ಕೊಡುಗೆ ಏನಿಲ್ಲಾ ,ಹಲವಾರು ಸೆಕ್ಟರ್ ಗಳ ತೆರಿಗೆ ಹೆಚ್ಚಿಸಿ ಹಣ ಸಂಗ್ರಹ ಮಾಡಲಾಗುತ್ತಿದೆ.

ರಾಜ್ಯದ ಜನರ ಹಣ ದುರ್ಬಳಕೆಯಾಗುತ್ತಿದೆ.ಕರಾವಳಿಯಲ್ಲಿ ನಡೆದ ಕ್ಯಾಬಿನೆಟ್ ನಲ್ಲಿ 35 ಸಾವಿರ ಕೋಟಿ ಅನುದಾನ ನೀಡುವ ಘೋಷಣೆ ಮಾಡಲಾಗಿತ್ತು.ಈ ಘೋಷಣೆಯಾಗಿ 2, 3 ತಿಂಗಳುಗಳು ಕಳೆದಿದೆ ಆದರೆ ಹಣ ಎಲ್ಲಿದೆ ? ಕರಾವಳಿಯ ಜನತೆಗೆ ಘೋಷಣೆ ಯ ಮೂಲಕ ತೃಪ್ತಿ ಪಡಿಸಲು ಯೋಚಿಸಿದಲ್ಲಿ ಪ್ರಾಯಶ್ಚಿತ್ತ ಕ್ಜೆ ಕಾಂಗ್ರೆಸ್ ಸಿದ್ಧವಾಗಿರಬೇಕು. ಬರಗಾಲದಿಂದ ರೈತರಿಗೆ ಬಿತ್ತನೆ ಬೀಜ ಸಮಸ್ಯೆಯಿಂದ ರಾಜ್ಯಕ್ಕೆ 62ಸಾವಿರ ಕೋಟಿ ನಷ್ಟ ,ನಷ್ಟದ ಹಣವನ್ನು ನೀಡುವಂತೆ ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಮನವಿ ಮಾಡಿದೆ ಎಂದರು .

ಕಬ್ಬು ಬೆಳೆಗಾರರಿಗೆ ಹೋರಾಟಬಗ್ಗೆ ಮಾತನಾಡಿದ ಅವರು ,ಕಬ್ಬು ಬೆಳೆಗಾರರಿಗೆ ಹೋರಾಟದ ಬಳಿಕವೂ ಯಾವುದೇ ಪ್ರಯೋಜನೆವಾಗಿಲ್ಲಾ ಇದುವರೆಗೂ ಕಬ್ಬು ಬೆಳೆಗಾರರ ನೆರವಿಗೆ ಈ ಸರಕಾರ ಬಂದಿಲ್ಲ,ಸರಿಯಾದ ನೀರು ಹಂಚಿಕೆಯಾಗದೆ ಕಬ್ಬು ಬೆಳೆ ಸಂಪೂರ್ಣ ನಾಶವಾಗಿದೆ.

ಸಕ್ಕರೆ ಕಾರ್ಖಾನೆ ಯ ಕೆಲವು ಮಾಲಕರು ಹೆಲಿಕ್ಯಾಪ್ಟರ್ ನಲ್ಲಿ ತಿರುಗುತ್ತಿದ್ದಾರೆ.ನಷ್ಟ ಆಗುತ್ತಿದ್ದರೆ ಇದು ಸಾಧ್ಯಾವಾ…? ರಾಜ್ಯದ ಜನತೆಯ ದಡಿಮೆಯ ತೆರಿಗೆ ರಾಜ್ಯದ ಖಜಾನೆ ತುಂಬಿಸುತ್ತಿದ್ದಾರೆ ಎಂದರು

ಹಿರಿಯೂರು ಉಪ ಚುನಾವಣಾ ವಿಚಾರವಾಗಿ ಮಾತನಾಡಿ ,ಬಿಜೆಪಿ ಅಲ್ಲಿ ನಿಲ್ಲಲು ಯಾವ ಗೊಂದಲಕ್ಕೆ ಅವಕಾಶ ಕೊಡಲ್ಲ .ನಮ್ಮ ಪಕ್ಷದ 40000 ಮತ ಇದೆ, ಇಲ್ಲಿ ಗೊಂದಲ ಇಲ್ಲ ತಾಳ್ಮೆ ಇದೆ . ತಾಳ್ಮೆಯಲ್ಲಿದ್ದೆನೆ, ನಮ್ಮ ಪಕ್ಷ ಪ್ರಾದೇಶಿಕ ಪಕ್ಷ ಎಂದರು.