ಸಜಿಪ ಮಗಾಣೆಯ ಎಲ್ಲಾ ದೈವ ದೇವರ ಧಾರ್ಮಿಕ ಕೆಲಸಕ್ಕೆ ಸುಮಾರು 60 ವರ್ಷಗಳಿಂದಲೂ ನಾದ ಸ್ವರ ವಾದಕರಗಿ ಸೇವೆ ಸಲ್ಲಿಸಿ ಅನೇಕ ಪ್ರಶಸ್ತಿಯನ್ನು ತನ್ನ ಮುಡಿಗೆರಿಸಿ ಕೊಂಡು ಪ್ರಸ್ತುತ 2025 – 2026ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಗಾಣೆಯ ಹಿರಿಯವಾರದ ಚಂದ್ರನಾಥ ಜೋಗಿಯವರನ್ನು ಅವರ ಸ್ವಗ್ರಹದಲ್ಲಿ ಅವರ ಮಗ ಪ್ರವೀಣ್ ಜೋಗಿ ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಶ್ರೀ ಮುದೆಲ್ ಮುಟ್ಟಿ ನಾಲ್ಕೈಯಿತ್ತಾಯ ದೈವಸ್ಥಾನದ ಪರಿವಾರ ದೈವಗಳ ಅಭಿವೃದ್ಧಿ ಸಮಿತಿ ವತಿಯಿಂದ ದೈವ ದೇವರ ಅನುಗ್ರಹ ಪ್ರಸಾದ ನೀಡಿ ಗೌರವ ಅಭಿನಂದನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುದೆಲ್ ಮುಟ್ಟಿ ನಾಲ್ಕೈಯಿತ್ತಾಯ ದೈವಸ್ಥಾನದ ಗಡಿ ಪ್ರಧಾನರಾದ ದುಗ್ಗಪ್ಪ ಭಂಡಾರಿ ಯಾನೆ ಗಂಗಾಧರ ಭಂಡಾರಿ ಆಳ್ವಾರಪಾಲು, ಮರ್ತಾಜೆ ಗುತ್ತು ಮಲರಾಯ ದೈವಸ್ಥಾನದ ಗಡಿ ಪ್ರಧಾನರಾದ ಸೋಮು ಮೂಲ್ಯ ಯಾನೆ ಸುಕುಮಾರ್ ಬಂಟ್ವಾಳ್, ಪರಾರಿ ಗುತ್ತಿನ ಧೀರಜ್ ಶೆಟ್ಟಿ, ಅಲಾಡಿ ಗುತ್ತು ಮನೆತನದ ಚಂದ್ರಶೇಖರ್ ಗಟ್ಟಿ, ಗಂಗಾಧರ್ ಗಟ್ಟಿ ಅಲಾಡಿ, ಸತೀಶ್ ಗಟ್ಟಿ ಅಲಾಡಿ, ಹಾಗೂ ದೀಕ್ಷಿತ್ ಶೆಟ್ಟಿ ಸಜಿಪ, ಹಾಗೂ ಹಿರಿಯವಾರದ ವಾಸು ಮಾಸ್ತರ್ ಕೈಕುoಜೆ, ಬಿ. ಸದಾನಂದ ಕೈಕುಂಜೆ ಪಾಲ್ಗೊಂಡಿದ್ದರು.

