ಚಿತ್ರಚೇತನ – 2026 ಚಿತ್ರಕಲಾ ಸ್ಪರ್ಧೆಯ ವಿಜೇತರ ಘೋಷಣೆ

0
3

ಕುಳಾಯಿ: ಯುವಚೇತನ, ಹೊಸಬೆಟ್ಟು – ಕುಳಾಯಿ, ನವಗಿರಿ ಸೇವಾ ಟ್ರಸ್ಟ್ (ರಿ) ಇದರ ಅಂಗಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಚಿತ್ರಚೇತನ – 2026 ಆನ್‌ಲೈನ್ ಚಿತ್ರಕಲಾ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಮಕ್ಕಳಲ್ಲಿರುವ ಚಿತ್ರಕಲಾ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಮೂರು ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ವಿಭಾಗ A (5 ರಿಂದ 8 ವರ್ಷ) – ಹಳ್ಳಿಯ ಸೊಬಗು

ಪ್ರಥಮ ಸ್ಥಾನವನ್ನು ನಿಧಿ ಕೈರಂಗಳ (3ನೇ ತರಗತಿ, ಶ್ರೀರಾಮ ವಿದ್ಯಾ ಕೇಂದ್ರ, ಕಲ್ಲಡ್ಕ), ದ್ವಿತೀಯ ಸ್ಥಾನವನ್ನು ಆರ್ಯನ್ ಜೆ. ಶೆಟ್ಟಿ (ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾಗಿರಿ, ಬಂಟ್ವಾಳ) ಹಾಗೂ ತೃತೀಯ ಸ್ಥಾನವನ್ನು ಭಾವಿನಿ (2ನೇ ತರಗತಿ, ವಿದ್ಯೋದಯ ಪಬ್ಲಿಕ್ ಶಾಲೆ) ಪಡೆದುಕೊಂಡಿದ್ದಾರೆ.

ವಿಭಾಗ B (9 ರಿಂದ 12 ವರ್ಷ) – ನಾ ಕಂಡ ದಸರಾ

ಪ್ರಥಮ ಸ್ಥಾನವನ್ನು ಅಂಕಿತ್ ಶರ್ಮಾ ಎಂ.ಜೆ. (7ನೇ ತರಗತಿ, ಕೆನರಾ ಶಾಲೆ, ಡೊಂಗರಕೇರಿ, ಮಂಗಳೂರು), ದ್ವಿತೀಯ ಸ್ಥಾನವನ್ನು ಪ್ರಭಾತ್ (6ನೇ ತರಗತಿ, ಅಮೃತ ಭಾರತಿ ವಿದ್ಯಾಕೇಂದ್ರ, ಹೆಬ್ರಿ) ಹಾಗೂ ತೃತೀಯ ಸ್ಥಾನವನ್ನು ನಿಹಾರ್ ಜೆ.ಎಸ್. (7ನೇ ತರಗತಿ, ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಶಾಲೆ, ಬ್ರಹ್ಮಾವರ) ಪಡೆದುಕೊಂಡಿದ್ದಾರೆ.

ವಿಭಾಗ C (13 ರಿಂದ 16 ವರ್ಷ) – ಶ್ರೀ ಕೃಷ್ಣ ಲೀಲೆ

ಪ್ರಥಮ ಸ್ಥಾನವನ್ನು ಆದಿತ್ (10ನೇ ತರಗತಿ, ಕೆನರಾ ಹೈಸ್ಕೂಲ್, ಉರ್ವ, ಮಂಗಳೂರು), ದ್ವಿತೀಯ ಸ್ಥಾನವನ್ನು ವಿನೀಶ್ ಪಿ. ಆಚಾರ್ಯ (ಎಸ್.ಆರ್. ಪಬ್ಲಿಕ್ ಶಾಲೆ, ಹೆಬ್ರಿ) ಹಾಗೂ ತೃತೀಯ ಸ್ಥಾನವನ್ನು ಮನ್ವಿತ್ ಕೆ.ಎಲ್. (9ನೇ ತರಗತಿ, ಚಿನ್ಮಯ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕದ್ರಿ, ಮಂಗಳೂರು) ಪಡೆದುಕೊಂಡಿದ್ದಾರೆ.

ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಯುವಚೇತನದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು, ಪ್ರೋತ್ಸಾಹಿಸಿದ ಪೋಷಕರು ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕರಿಗೂ ಸಂಸ್ಥೆಯು ಕೃತಜ್ಞತೆಗಳನ್ನು ಸಲ್ಲಿಸಿದೆ.

– ಯುವಚೇತನ, ಹೊಸಬೆಟ್ಟು – ಕುಳಾಯಿ
ನವಗಿರಿ ಸೇವಾ ಟ್ರಸ್ಟ್ (ರಿ) ಇದರ ಅಂಗಸಂಸ್ಥೆ