ವರದಿ ರಾಯಿ ರಾಜ ಕುಮಾರ್
ಭಾರತೀಯ ಜೀವನ ಪದ್ಧತಿ ಉತ್ತಮ ಸಂಸ್ಕಾರವನ್ನು ಉಳಿಸಿದೆ. ಉತ್ತಮ ರೀತಿಯಲ್ಲಿ ಸ್ಥಾಪಿಸಲ್ಪಟ್ಟ ಸಂಸ್ಥೆ ಆದರ್ಶವನ್ನು ಕಲಿಸಿ ಬೆಳೆಸುತ್ತದೆ. ಎಂಸಿಎಸ್ ಸಂಸ್ಥೆ ಮನೆಮನೆಯ ಜ್ಯೋತಿಯನ್ನು ಬೆಳಗಿಸಿ ಉತ್ತಮ ಬದುಕನ್ನು ನೀಡುತ್ತಿದೆ. ದೇವಾಲಯವು ಭಕ್ತರ ಕಾಣಿಕೆಯನ್ನು ಊಟ ನೀಡಿ ತಣಿಸುವ ರೀತಿ ಸಂಸ್ಥೆಗಳು ಸದಸ್ಯರ ಬೇಕು ಬೇಡಗಳನ್ನು ಪೂರೈಸಿ ಕಷ್ಟಕ್ಕೆ ಸಹಕರಿಸಿ ಉಚ್ಛ್ರಾಯಕೆ ಬಂದಿದೆ. ಇದೇ ರಾಮರಾಜ್ಯದ ಕಲ್ಪನೆ. ಪ್ರತಿಯೊಬ್ಬರು ರಾಮನಂತೆ ಆದಾಗ ಸುಭಿಕ್ಷೆ, ಆದರ್ಶತೆ, ಸಾನಿಧ್ಯ, ಶ್ರೇಷ್ಠತೆ ನೆಲೆಗೊಂಡು ದೇವಸ್ಥಾನ, ರಾಜಾಸ್ಥಾನ, ಗೃಹಸ್ಥಾನಗಳು ಕಲಶ ಅಭಿಷೇಕದ ಮೂಲಕ ಯಜಮಾನನಂತೆ ಮೇರುತನ ಮೈಗೂಡಿಸಿಕೊಳ್ಳುತ್ತದೆ ಎಂದು ಕಟೀಲು ದುರ್ಗಾಪರಮೇಶ್ವರಿ ದೇವಾಲಯದ ಅನುವಂಶಿಕ ಅರ್ಚಕ ಕಮಲಾದೇವಿ ಪ್ರಸಾದ ಅಸ್ರಣ್ಣ ಅಧ್ಯಕ್ಷೀಯ ದಿಕ್ಸೂಚಿ ಭಾಷಣದಲ್ಲಿ ಮಾರ್ಗದರ್ಶಿಸಿದರು.
ಉಪನ್ಯಾಸಕ ನಿರಂಜನ ಮಾತನಾಡಿ ಜನರ ಹಿತಕ್ಕಾಗಿ ಸ್ಪಂದಿಸಿ, ಭ್ರಷ್ಟಾಚಾರ ರಹಿತ ಆಡಳಿತದಿಂದ ರಾಮರಾಜ್ಯ ನೆಲಗೊಳ್ಳುತ್ತದೆ ಎಂದರು. ತಪ್ಪು ನಡೆದಂತೆ ಸದಾ ಎಚ್ಚರಿಸುವ ಈ ಸಂಸ್ಥೆ ಎಲ್ಲರಿಗೂ ಮಾರ್ಗದರ್ಶಕವಾಗಿದೆ ಎಂದು ಹನುಮಂತ, ವೆಂಕಟರಮಣ ದೇವಳದ ಆಡಳಿತ ಉದ್ದೇಶದ ಈ ಉಮೇಶ್ ಪೈ ಮೆಚ್ಚಿಕೊಂಡರು. ಸ್ವಂತ ಆಸೆಯನ್ನು ಬದಿಗಿಟ್ಟು ವ್ಯಕ್ತಿಗತ ಪ್ರಭುತ್ವಕ್ಕೆ ನಿಸ್ಪೃಹತೆಯನ್ನು ಸ್ಟೋರಿ ರಾಜ್ಯವನ್ನು ಗೆದ್ದುಕೊಂಡರು ಇತರರಿಗೆ ಹಸ್ತಾಂತರಿಸಿದ ಶ್ರೀ ರಾಮ ಹಾಗೂ ಕೃಷ್ಣರು ಎಲ್ಲರಿಗೂ ಆದರ್ಶಪ್ರಾಯರು ಎಂದು ಸಿಎ ಬಾಲಕೃಷ್ಣ ಭಟ್ ನುಡಿದರು. ವೇದಿಕೆಯಲ್ಲಿ ಹೊಸಂಗಡಿ ಅರಮನೆ ಸುಕುಮಾರ್ ಶೆಟ್ಟಿ ಹಾಜರಿದ್ದರು.
ಉದ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿದ ಮಹನೀಯರನ್ನು ಸನ್ಮಾನಿಸಲಾಯಿತು. 10,000ಕ್ಕೂ ಹೆಚ್ಚು ಸದಸ್ಯರ ಸ್ಪಂದನೆ ಮಹಾಸಭೆಗೆ ದೊರಕಿದುದಕ್ಕೆ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ ಸ್ವಾಗತಿಸಿ ಪ್ರಾಸ್ತಾವಿಕದಲ್ಲಿ ಸಂತಸ ವ್ಯಕ್ತಪಡಿಸಿದರು. ಚೇತನ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಸಿ ಎಚ್ ಅಬ್ದುಲ್ ಗಪೂರ್ ವಂದಿಸಿದರು.

