-ಮಂದಾರ ರಾಜೇಶ್
ಬೆಳಗಾವಿಯ ಅನ್ನಪೂರ್ಣೇಶ್ವರಿ ಹ್ಯುಮ್ಯಾನಿಟಿ ಫೌಂಡೇಶನ್ ವತಿಯಿಂದ ಕನ್ನಡ ರಾಜ್ಯೋತ್ಸವ ದಿನಾಚರಣೆ ಹಾಗೂ ರಾಜ್ಯಮಟ್ಟದ “ಹೆಮ್ಮೆಯ ಕರ್ನಾಟಕ ರತ್ನ” ಪ್ರಶಸ್ತಿ ಪ್ರದಾನ ಸಮಾರಂಭ –2026 ಕಾರ್ಯಕ್ರಮ ನಗರದ ಜೆ. ಸಿ. ರಸ್ತೆಯ ನಯನ ರಂಗಮಂದಿರದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಮುಖ್ಯ ಅತಿಥಿಗಳಾಗಿ ಅಂಜನಾದ್ರಿ ಸಿದ್ದಿಪೀಠಮ್ ನ ಚರಣ್ ಭಾರದ್ವಾಜ್ ಶರ್ಮ ಗುರೂಜಿ ,ಗೋಕಾಕ ವಕೀಲರ ಸಂಘದ ಅಧ್ಯಕ್ಷರಾದ ಸುಭಾಷ್ ಗೌಡಪ್ಪ ಬಿರಾದಾರ ಪಾಟೀಲ ಇವರು ಬೆಂಗಳೂರಿನ ಜನನಿ ಪಿ.ಯು. ಕಾಲೇಜಿನ ಪದ್ಮಾವತಿ ಕೆ.ವಿ. ರವರ ಶೈಕ್ಷಣಿಕ ಸಾಧನೆಗೆ ಡಾ .ಸರ್ವೆಪಲ್ಲಿ ರಾಧಾಕೃಷ್ಣನ್ ಸದ್ಭಾವನಾ ಪ್ರಶಸ್ತಿ , ಪ್ರಣವ ಮೀಡಿಯಾ ಹೌಸ್ ಇದರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ರವರಿಗೆ ‘ಶ್ರೀಕೃಷ್ಣದೇವರಾಯ ಸದ್ಭಾವನಾ ಪ್ರಶಸ್ತಿ’ನೀಡಿ ಸನ್ಮಾನಿಸಲಾಯ್ತು .

ಸಾಧನೆಗೈದ ಗಣ್ಯರನ್ನು “ಹೆಮ್ಮೆಯ ಕರ್ನಾಟಕ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ನಿತ್ಯಾ ಎಂ ಆಚಾರ್ , ಗೀತಾ ಆನಂದ ಜಾಧವ್ , ಡಾ. ಮಹಾಂತೇಶ ಎಸ್. ಕಡಲಗಿ ಉಪಸ್ಥಿತರಿದ್ದರು . ರಮೇಶ ವಿ ಕಾಂಬಳೆ ಕಾರ್ಯಕ್ರಮವನ್ನು ನಿರೂಪಿಸಿದರು.

