
ಲಯನ್ಸ್ ಕ್ಲಬ್ ಬೆಳ್ಮಣಿನವರು ಸಂಘಟಿಸಿದ ವಿಶ್ವಶಾಂತಿ ಸ್ಪರ್ಧೆಯಲ್ಲಿ ಬೆಳ್ಮಣ್ ಕ್ಲಬ್ ನಿಂದ ಪ್ರತಿನಿಧಿಸಲ್ಪಟ್ಟ ಶ್ರೀ ಲಕ್ಷ್ಮೀ ಜನಾರ್ಧನ ಹೈಸ್ಕೂಲಿನ 8ನೇ ತರಗತಿಯ ವಿದ್ಯಾರ್ಥಿ ಕುಮಾರಿ. ಆರಾಧ್ಯ ಶೆಟ್ಟಿ ರಚಿಸಿದ ಚಿತ್ರ ಲಯನ್ಸ್ ಜಿಲ್ಲಾ ಮಟ್ಟದಲ್ಲಿ ಮೊದಲ 5 ಸ್ಥಾನಗಳಲ್ಲಿ ಒಂದಾಗಿ ಸಮಾಧಾನಕರ ಬಹುಮಾನ ಗಳಿಸಿಕೊಂಡಿದೆ.

ಜಿಲ್ಲಾ ಮಟ್ಟದಲ್ಲಿ 40 ಕ್ಕೂ ಹೆಚ್ಚು ಕ್ಲಬ್ ಗಳು ತಮ್ಮ ಶಾಂತಿ ಚಿತ್ರಗಳನ್ನು ಕಳಿಸಿರುತ್ತಾರೆ. ಉಡುಪಿಯ ನುರಿತ ಕಲಾಶಿಕ್ಷಕರಿಂದ ನಿರ್ಣಯಿಸಿ ವಿಜೇತರಿಗೆ ಜಿಲ್ಲಾ ಗವರ್ನರ್ ಲಯನ್ ರಾಜೀವ್ ಕೋಟ್ಯಾನ್, ಜಿಲ್ಲಾ ಸಂಯೋಜಕರಾದ ಲಯನ್ ರಮಾ ಇ ಬೋಳಾರ್ ಮತ್ತು ಮಾಜಿ ಜಿಲ್ಲಾ ಗವರ್ನರ್ ಲಯನ್ ಎನ್ ಎಮ್ ಹೆಗಡೆ ಯವರು ಅಭಿನಂದಿಸಿದರು.
