ನ. 30ರಂದು ಕೆಂಚನೂರು ದೊಡ್ಡಮನೆ ಕುಟುಂಬದ ಸಾಂಪ್ರದಾಯಿಕ ಕಂಬಳ

0
10

ಕೆಂಚನೂರು: ಶ್ರೀ ಸ್ವಾಮಿ, ನಾಗ ಹಾಗೂ ಯಕ್ಷಿ ಅನುಗ್ರಹದೊಂದಿಗೆ ಕೆಂಚನೂರು ದೊಡ್ಡಮನೆ ಕುಟುಂಬಸ್ಥರ ಸಾಂಪ್ರದಾಯಿಕ ಕಂಬಳ ಮಹೋತ್ಸವವು ನವೆಂಬರ್ 30ರ ಸೋಮವಾರ ನಡೆಯಲಿದೆ.

ಕುಟುಂಬದ ಸಂಪ್ರದಾಯ ಹಾಗೂ ಧಾರ್ಮಿಕ ಆಚರಣೆಯ ಭಾಗವಾಗಿ ನಡೆಯಲಿರುವ ಈ ಕಂಬಳ ಮಹೋತ್ಸವವನ್ನು ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಶ್ರೇಯೋಭಿವೃದ್ಧಿಗಾಗಿ ಆಯೋಜಿಸಲಾಗಿದೆ.

ಸಾಂಪ್ರದಾಯಿಕ ಕಂಬಳದ ಅಂಗವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು, ಗ್ರಾಮಸ್ಥರು ಹಾಗೂ ಕಂಬಳಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕೆಂಚನೂರು ದೊಡ್ಡಮನೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.