
ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ (ರಿ.) ಹಳೇಕೋಟೆ, ಬೆಳ್ತಂಗಡಿ, ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ (ಲಿ.) ಬೆಳ್ತಂಗಡಿ ಹಾಗೂ ಸ್ಪಂದನಾ ಸೇವಾ ಸಂಘ ಬೆಳ್ತಂಗಡಿ ಇವುಗಳ ಸಹಯೋಗದಲ್ಲಿ ಯುವ ವೇದಿಕೆ ಮತ್ತು ಮಹಿಳಾ ವೇದಿಕೆಯ ನೇತೃತ್ವದಲ್ಲಿ ನಡೆದ ತಾಲೂಕು ಮಟ್ಟದ ‘ಗೌಡೆರೆ ಗೌಜಿ ಗಮ್ಮತ್ 2026’ ಕ್ರೀಡಾಕೂಟದಲ್ಲಿ ಮೊಗ್ರು ಗ್ರಾಮದ ತಂಡವು ಗಮನಾರ್ಹ ಸಾಧನೆ ಮಾಡಿದೆ.
ಪಂದ್ಯಾಟದಲ್ಲಿ ಮೊಗ್ರು ಗ್ರಾಮದ ಪುರುಷರ ಹಗ್ಗಜಗ್ಗಾಟ ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ಮಹಿಳೆಯರ ತ್ರೋಬಾಲ್ ತಂಡವೂ ಪ್ರಥಮ ಸ್ಥಾನ ಗಳಿಸಿದೆ. ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಗ್ರಾಮಕ್ಕೆ ಕೀರ್ತಿ ತಂದಿದೆ.
ಈ ಮೂಲಕ ಮೊಗ್ರು ಗ್ರಾಮವು ಒಟ್ಟು ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದು, ಶಾಶ್ವತ ಫಲಕ ಹಾಗೂ ನಗದು ಬಹುಮಾನಗಳನ್ನು ಪಡೆದುಕೊಂಡಿದೆ. ಗ್ರಾಮದ ಕ್ರೀಡಾಪಟುಗಳ ಸಂಘಟಿತ ಪ್ರಯತ್ನ ಮತ್ತು ಸಾಧನೆಗೆ ಅಭಿನಂದನೆಗಳು ವ್ಯಕ್ತವಾಗಿವೆ.
