ಸೈಲಸ್ ಪದವಿ ಪೂರ್ವ ಕಾಲೇಜು ನೂತನ ಪ್ರಾಂಶುಪಾಲರ ಪದಗ್ರಹಣ ಸಮಾರಂಭ

0
58

ಉಡುಪಿ: ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ ಅದೊಂದು ಶಕ್ತಿ. ಬದಲಾಗುತ್ತಿರುವ ಸನ್ನಿವೇಶದಲ್ಲಿ ಶಿಕ್ಷಕರು ಸೃಜನಶೀಲತೆಗೆ ತಮ್ಮನ್ನು ತಾವು ತೆರೆದುಕೊಳ್ಳಬೇಕು, ಪ್ರಾಮಾಣಿಕ ಶಿಕ್ಷಕರೇ ಸಂಸ್ಥೆಯ ಆಧಾರ ಸ್ತಂಭಗಳು ಎಂದು ಕ್ರಿಸ್ಟಲ್ ಎಜುಕೇಶನ್ ಟ್ರಸ್ಟ್ ನ ಶೈಕ್ಷಣಿಕ ನಿರ್ದೇಶಕಿ ಡಿಯೇರ್ ಡ್ರಾ ಮಾಬೆನ್ ಹೇಳಿದರು. ಅವರು ಸೈಲಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ನಡೆದ ನೂತನ ಪ್ರಾಂಶುಪಾಲರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಡಾ. ಜಾರ್ಜ್, ಶಿಕ್ಷಕರ ಮಾರ್ಗದರ್ಶನದಿಂದ ಸಾವಿರಾರು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುತ್ತಾರೆ. ಬೇರೆ ಯಾವುದೇ ವೃತ್ತಿಗಿಂತ ಶಿಕ್ಷಕ ವೃತ್ತಿ ಮಹತ್ವದ್ದಾಗಿದೆ ಎಂದರು. ಸಂಸ್ಥೆಯ ವೈಸ್ ಪ್ರೆಸಿಡೆಂಟ್ ಸಂತೋಷ್ ಮಾಬೆನ್ ನೂತನ ಪ್ರಾಂಶುಪಾಲರಿಗೆ ಅಧಿಕಾರ ಹಸ್ತಾಂತರಿಸಿ ಸಂಸ್ಥೆಯನ್ನು ಸರ್ವಾಂಗೀಣ ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ಮಾತನಾಡಿ ಪ್ರಾಮಾಣಿಕ ಶಿಕ್ಷಕರು ಸಂಸ್ಥೆ ಯ ಬೆನ್ನೆಲುಬಾಗಿದ್ದು ನೂತನ ಪ್ರಾಂಶುಪಾಲರ ನೇತೃತ್ವದಲ್ಲಿ ಕಾಲೇಜಿನ ಕೀರ್ತಿ ಇನ್ನಷ್ಟು ಎತ್ತರಕ್ಕೇರಲಿ ಎಂದು ಆಶಿಸಿದರು.
ಸೈಲಸ್ ಇಂಟರ್ನ್ಯಾಷನಲ್ ಸ್ಕೂಲಿನ ಪ್ರಿನ್ಸಿಪಲ್ ಜೆಸಿಂತಾಡಿಕೊಸ್ಥ ಉಪಸ್ಥಿತರಿದ್ದರು ಶೈಕ್ಷಣಿಕ ಸಲಹೆಗಾರ ಡಾ. ರಭಿ ಪುತಿರನ್ ಹಾಗೂ ಉಪನ್ಯಾಸಕ ರಂಜನ್ ಪ್ರಾರ್ಥಿಸಿದರು. ಪೂರ್ಣಿಮಾ ಸ್ವಾಗತಿಸಿ ರೋಹನ್ ವಂದಿಸಿದರು. ಉಪನ್ಯಾಸಕ ನವೀನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here