ಸಾಯಿ ಬಾಬಾ ಪಾದುಕೆ ದರ್ಶನ ಪಡೆಯುತ್ತಿರುವ ಭಕ್ತರು

0
46

ಬೆಂಗಳೂರು -ಎ. 17-ಬೆಂಗಳೂರಿನ ಹಳೆಯ ದೇವಾಲಗಳಲ್ಲಿ ಒಂದಾದ ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿರುವ ಶ್ರೀ ಸಾಯಿ ಮಡಳಿಯ ಸಾಯಿಮಂದಿರ ಸಾಯಿಬಾಭರವರ ಮೂಲ ಪಾದುಕೆ ದರ್ಶನ ಉತ್ಸವವನ್ನ
ಇಂದು ಮತ್ತು ನಾಳೆ ಏರ್ಪಡಿಸಿದೆ, ಶಿರಾಡಿಯಿಂದ ಆಗಮಿಸಿದ ಪಾಡುಕೆಗಳನ್ನ ಮಲ್ಲೇಶ್ವರಂ ಪದವಿಪೂರ್ವ ಶಿಕ್ಷಣ ಇಲಾಖೆ ಸನಿಹದಿಂದ 14 ನೇ ತಿರುವಿನಲ್ಲಿರುವ ಸಾಯಿ ಮಂದಿರಕ್ಕೆ ಉತ್ಸವ ಮೆರವಣಿಗೆ ಮುಖಾಂತರ ತಂದು ಸಾರ್ವಜನಿಕ ಭಕ್ತರ ದರ್ಶನಕ್ಕೆಬೆಳಿಗ್ಗೆ 6 ರಿಂದ ರಾತ್ರಿ 10ರವರೆಗೆ ಇಡಲಾಗಿದೆ, ಸಾವಿರಾರು ಭಕ್ತರು ಬೆಳಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ಬಾಭರವರ ಪಾದುಕೆ ದರ್ಶನ ಪಡೆಯುತ್ತಿದ್ದಾರೆ ಅನೇಕ ಗಣ್ಯರು ಸಹ ಆಗಮಿಸಿ ದರ್ಶನ ಪಡೆದರು ಇಂದು ಮತ್ತು ನಾಳೆಯವರೆಗೆ ಒಂದು ಲಕ್ಷ ಭಕ್ತರು ದರ್ಶನ ಪಡೆಯುವ ನಿರೀಕ್ಷೆ ಇದೆ ಎಂದು ಸಾಯಿ ಮಂಡಳಿ ಅಧ್ಯಕ್ಷ ಡಾ. ಕೆ ನಾಗೇಶ್ ತಿಳಿಸಿದರು. ಭಕ್ತರಿಗೆ ಕುಡಿಯುವ ನೀರು ಪ್ರಸಾದ ಮತ್ತು ಅನಾಹುತಗಳು ಆಗದಂತೆ ಎಲ್ಲಾ ವ್ಯವಸ್ಥೆಯನ್ನ ಅಚ್ಚುಕಟ್ಟಾಗಿ ಮಾಡಲಾಗಿದೆ.

LEAVE A REPLY

Please enter your comment!
Please enter your name here