ಏ.19 ಮತ್ತು 20ರಂದು ವಾರ್ಷಿಕ ನೇಮೋತ್ಸವ ‘ರಜತ ಕುದುರೆ ಬಂಡಿ’ ಮೆರವಣಿಗೆ, ಪರಿಚಾರಕರಿಗೆ ಸನ್ಮಾನ ವಿಶೇಷತೆ

0
46


ಬಂಟ್ವಾಳ: ಇಲ್ಲಿನ ಅರಳ ಸಮೀಪದ ಮಾವಂತೂರು ಶ್ರೀ ಬಲವಂಡಿ ಪಿಲ್ಚಂಡಿ ಕ್ಷೇತ್ರದಲ್ಲಿ ಏ.19ರಿಂದ .20ರ ತನಕ ವಾರ್ಷಿಕ ನೇಮೋತ್ಸವ ಅದ್ದೂರಿಯಾಗಿ ನಡೆಯಲಿದೆ.
ಏ.19ರಂದು ಬೆಳಿಗ್ಗೆ 9 ಗಂಟೆಗೆ ಗಣಯಾಗ ಮತ್ತು ಮತ್ತು ಪ್ರಸನ್ನಪೂಜೆ, ಮಧ್ಯಾಹ್ನ ಗಂಟೆ 12 ರಿಂದ ರಜತ ಪಲ್ಲಕಿ ಬಲಿ ಉತ್ಸವ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಗಂಟೆ 8 ರಿಂದ ಬಲವಂಡಿ ದೈವದ ನೇಮೋತ್ಸವ ನಡೆಯಲಿದೆ. ಏ.20ರಂದು ಬೆಳಿಗ್ಗೆ 8 ಗಂಟೆಗೆ ಪ್ರಸನ್ನಪೂಜೆ, ರಾತ್ರಿ 8 ಗಂಟೆಗೆ ಪಿಲ್ಚಂಡಿ ದೈವದ ನೇಮೋತ್ಸವ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ವಿಶೇಷತೆ:
ಈ ಬಾರಿ ಗ್ರಾಮದೇವತೆ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನಕ್ಕೆ ಒಂದು ಕಿಲೋ ಬೆಳ್ಳಿ ಸಮರ್ಪಣೆ ಮತ್ತು ಕೊಯಿಲ ಶಾರದೋತ್ಸವ ಮೈದಾನದಿಂದ ಬಲವಂಡಿ ಕ್ಷೇತ್ರಕ್ಕೆ ‘ರಜತ ಕುದುರೆ ಬಂಡಿ’ ಮೆರವಣಿಗೆ ಗುರುವಾರ ಸಂಜೆ ನೆರವೇರಿಸಲಾಗಿದೆ. ಏ.19ರಂದು ನಡೆಯುವ ಬಲವಂಡಿ ದೈವದ ನೇಮೋತ್ಸವ ಸಂದರ್ಭದಲ್ಲಿ ‘ದೈವಾರಾಧನೆಯಲ್ಲಿ ತೊಡಗಿಸಿಕೊಂಡ ಪರಿಚಾರಕರನ್ನು ಸನ್ಮಾನಿಸಿ ಗೌರವಿಸಲಾಗುವುದು’ ಎಂದು ಗಡಿ ಪ್ರಧಾನ ಎಂ. ದುಗರ್ಾದಾಸ್ ಶೆಟ್ಟಿ ಮಾವಂತೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here