ದಾವಣಗೆರೆ ಏಪ್ರಿಲ್, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳ ಗಡಿನಾಡಿನ ಕಲಾಕುಂಚ ಶಾಖೆಯ ಆಶ್ರಯದಲ್ಲಿ ಏಪ್ರಿಲ್ 24 ರಂದು ಬೆಳಿಗ್ಗೆ 10 ಗಂಟೆಯಿಂದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿಯ ವರಾಹ ಭಜನಾ ಮ೦ದಿರದ ಸಭಾಂಗಣದಲ್ಲಿ ಹಿರಿಯರಿಗೆ- ಕಿರಿಯರಿಗೆ ಉಚಿತವಾಗಿ ಸುಗಮ ಸಂಗೀತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಕಲಾ ಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ದಕ್ಷಿಣ ಕನ್ನಡದ ಪುತ್ತೂರಿನ ಉದಯಗಾನ ಸಂಗೀತ ಕಲಾಕೇಂದ್ರದ ಸಂಗೀತ ಶಿಕ್ಷಕಿಯಾದ ಶ್ರೀಮತಿ ಸುಮನಾರಾವ್ ಮತ್ತು ಕುಮಾರಿ ಸುಪ್ರಜಾ ರಾವ್ ಸಂಗೀತ ಕಾರ್ಯಾ ಗಾರ ನಡೆಸಿಕೊಡಲಿದ್ದಾರೆ. ಭಕ್ತಿಗೀತೆ, ಭಾವಗೀತೆ, ಜನಪದಗೀತೆ, ಚಲನಚಿತ್ರ ಗೀತೆಗಳ ಪಾಠ ಮಾಡಲಿದ್ದು ಸಮಾ ರಂಭದ ಉದ್ಘಾಟನೆಯನ್ನು ಎಡಕ್ಕಾನ ಶ್ರೀಮತಿ ಲತಾ ಕೇಶವಭಟ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲಿಂಗಪ್ಪ ಪಟೇಲ್ ಆಗಮಿಸಲಿದ್ದಾರೆ. ಸಮರಂಭದ ಅಧ್ಯಕ್ಷತೆಯನ್ನು ಕೇರಳದ ಗಡಿನಾಡಿನ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಕಾರಂತ್ ವಹಿಸಿ ಕೊಳ್ಳಲಿದ್ದಾರೆ. ಏಪ್ರಿಲ್ 25 ರಂದು ಸಂಜೆ ಸಮಾರೋಪ ಸಮಾರಂಭನಡೆಯಲಿದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸುವವರು 8281283091, 8281948031 ಈ ಸನೀಹವಾಣಿಗೆ ಸಂಪರ್ಕಿಸಬಹುದು ಎಂದು ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.