ಹಿಂಜಾವೇ ಅಹೋರಾತ್ರಿ ಧರಣೀಯ ಎಚ್ಚರಿಕೆ ಬೆನ್ನಲ್ಲೇ ಆರೋಪಿಗಳ ಬಂಧನ ಧರಣಿ ವಾಪಸ್

0
233

ಇತ್ತೀಚೆಗೆ ಮೂಡಬಿದ್ರೆ ಪರಿಸರದಲ್ಲಿ ನಿರಂತರವಾಗಿ ಗೋ ಕಳ್ಳತನ ನಡೆಯುತ್ತಿದ್ದು ಈ ಬಗ್ಗೆ ಪೋಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳದೇ ಇರುವುದರಿಂದ ಮತ್ತು ಬಡ ರಿಕ್ಷಾ ಚಾಲಕರನ್ನು ಮತ್ತು ವಾಹನ ಸವಾರರನ್ನು ಪರಿಶೀಲನೆ ನೆಪದಲ್ಲಿ ವಾಹನಗಳನ್ನು ನಿಲ್ಲಿಸಿ ಹಣ ವಸೂಲು ಮಾಡಿ ಅವಾಚ್ಯ ಶಬ್ದದಲ್ಲಿ ನಿಂದಿಸುತ್ತಿದ್ದ ಎಸ್ ಐಯವರಾದ ನವೀನ್ ಮತ್ತು ಕೃಷ್ಣಪ್ಪ ಅವರ ವರ್ತನೆಯ ವಿರುದ್ದ ಹಾಗೂ ಆನೆಗುಡ್ಡೆ ಪರಿಸರದ ಅಮಾಯಕ ಯುವಕನ ಕೊಲೆ ಯತ್ನದ ಆರೋಪಿತರನ್ನು ಬಂಧಿಸದೆ ಇರುವುದರ ಬಗ್ಗೆ ನಮ್ಮ ಸಂಘಟನೆಯ ಹಿಂದೂ ಜಾಗರಣ ವೇದಿಕೆ ಮೂಡಬಿದ್ರೆ ತಾಲೂಕು ಮೂಡಬಿದ್ರೆ ಪೋಲೀಸ್ ಠಾಣೆ ಮುಂದುಗಡೆ ಅಹೋ ರಾತ್ರಿ ಧರಣಿ ಮಾಡಲು ನಿರ್ಧಾರ ಮಾಡಿರುತ್ತೇವೆ.
ಮೂಡಬಿದ್ರೆ ಪೋಲೀಸರು ಅಹೋ ರಾತ್ರಿ ಧರಣಿಯ ವಿಚಾರವನ್ನು ತಿಳಿದು ನಮ್ಮ ಸಂಘಟನೆಯ ಪ್ರಮುಖರನ್ನು ಕರೆದು ನಮ್ಮ ಅಹವಾಲುಗಳನ್ನು ಸ್ವೀಕರಿಸಿ ನಾವು ಪ್ರತಿಭಟನೆಗೆ ಉದ್ದೇಶಿಸಿರುವ ವಿಚಾರಗಳ ಬಗ್ಗೆ ಸಮರ್ಪಕವಾದ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದ್ದು, ಸದ್ರಿ ಭರವಸೆಯ ಪ್ರಕಾರ ದಿನಾಂಕ 24-04-2025 ರಂದು ದನ ಕಳ್ಳತನದ ಇಬ್ಬರು ಆರೋಪಿತರನ್ನು ಮತ್ತು ಕಾಲು ಕಡಿದು ಕೊಲೆ ಯತ್ನಕ್ಕೆ ಪ್ರಯತ್ನ ಪಟ್ಟ ಆರೋಪಿತರನ್ನು ಬಂಧಿಸಿರುತ್ತಾರೆ ಅಷ್ಟು ಮಾತ್ರವಲ್ಲದೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಇಬ್ಬರು ಎಸ್ ಐ ಯವರಾದ ನವೀನ್ ಮತ್ತು ಕೃಷ್ಣಪ್ಪ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿರುತ್ತಾರೆ.
ಮೂಡಬಿದ್ರೆ ಪೋಲಿಸರು ದನ ಕಳ್ಳರನ್ನು ಮತ್ತು ಕೊಲೆ ಯತ್ನಕ್ಕೆ ಪ್ರಯತ್ನಿಸಿರುವ ಬಗ್ಗೆ ಪೋಲಿಸರು ತಕ್ಷಣವೇ ನಮ್ಮ ಭೇಡಿಕೆಗೆ ಸ್ಪಂದಿಸಿರುವುದರಿಂದ ನಮ್ಮ ಅಹೋ ರಾತ್ರಿ ಧರಣಿಯನ್ನು ವಾಪಾಸು ಪಡೆದುಕೊಂಡಿರುತ್ತೇವೆ. ಮೂಡಬಿದ್ರೆಯಲ್ಲಿರುವ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಬೇಕು ಮತ್ತು ಅಕ್ರಮ ಕಸಾಯಿಖಾನೆಗಳನ್ನು ನಡೆಸುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಇದಕ್ಕೆ ಪೋಲೀಸ್ ಇಲಾಖೆ ವಿಫಲವಾದರೆ ಮುಂದಿನ ದಿನಗಳಲ್ಲಿ ಎಲ್ಲಾ ಪರಿವಾರದ ನಮ್ಮ ಸಂಘಟನೆಯು ಜೊತೆ ಸೇರಿಕೊಂಡು ಉಗ್ರ ಹೋರಾಟ ಮಾಡಲು ಸಿದ್ದರಿದ್ದೇವೆ.

ನಮ್ಮ ಪ್ರತಿಭಟನೆಯ ಎಚ್ಚರಿಕೆಯ ಬೆನ್ನಲ್ಲೇ ತಕ್ಷಣವೇ ಸ್ಪಂದಿಸಿ ಆರೋಪಿತರನ್ನು ಬಂಧಿಸಿದ ಮಾನ್ಯ ಎ ಸಿ ಪಿ ಶ್ರೀಕಾಂತ್ ಮತ್ತು ಮೂಡಬಿದ್ರೆ ಪೋಲೀಸ್ ಠಾಣಾ ಸರ್ಕಲ್ ಇನ್ಸೆಪೆಕ್ಟರ್ ಸಂದೇಶ್ ಪಿ ಜಿ ಮತ್ತು ಅವರ ತಂಡಕ್ಕೆ ನಮ್ಮ ಸಂಘಟನೆಯ ಪರವಾಗಿ ಧನ್ಯವಾದಗಳನ್ನು ಆರ್ಪಿಸುತ್ತಿದ್ದೇವೆ ಎಂದು ಹಿಂಜಾವೇ ಪ್ರಕಟಣೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here