ಎಕ್ಸಲೆಂಟ್ : ರಾಷ್ಟ್ರ ಮಟ್ಟದ ಪರೀಕ್ಷೆ ದ.ಕ – ಉಡುಪಿಗೆ ಎಕ್ಸಲೆಂಟ್ ಪ್ರಥಮ

0
1449

ಎನ್‌ಟಿಎ ನಡೆಸುವ ರಾಷ್ಟ್ರ ಮಟ್ಟದ ಇಂಜಿನಿಯರಿAಗ್ ಪ್ರವೇಶ ಪರೀಕ್ಷೆಯ ಜೆಇಇ ಮೈನ್ ನಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಶಿಶಿರ್ ಶೆಟ್ಟಿಯನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ ನಡೆಸುವ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆಯಲು ನಡೆಸುವ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ 99.97143 ಪರ್ಸೆಂಟೈಲ್ ನೊಂದಿಗೆ ಪ್ರಥಮ ಸ್ಥಾನಿಯಾದ 528 ನೇ ರ‍್ಯಾಂಕ್ ಪಡೆದ ಶಿಶಿರ್ ಶೆಟ್ಟಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ 7ನೇ ರ‍್ಯಾಂಕ್ ಪಡೆದಿದ್ದರು.
ಸನ್ಮಾನಕ್ಕೆ ಪ್ರತಿಕ್ರಯಿಸಿದ ಶಿಶಿರ್ ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಸತತ ಪರಿಶ್ರಮ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಕಾರ‍್ಯದರ್ಶಿ ರಶ್ಮಿತಾ ಜೈನ್ ಅವರ ನಿರಂತರ ಪ್ರೋತ್ಸಾಹ, ಉಪನ್ಯಾಸಕ ವೃಂದದ ಬೆಂಬಲ ನಾನು ಈ ಗುರಿ ತಲುಪುವಲ್ಲಿ ಸಹಕಾರಿಯಾಯಿತು ಎಂದರು. ಸನ್ಮಾನಕ್ಕೆ ಪ್ರತಿಕ್ರಯಿಸಿದ ಶಿಶಿರ್ ಹೆತ್ತವರು ನನ್ನ ಮಗನ ಸಾಧನೆಯಲ್ಲಿ ಎಕ್ಸಲೆಂಟ್‌ನ ಕೊಡುಗೆ ಅನನ್ಯವಾದುದು ಇಲ್ಲಿನ ಗುರುಕುಲ ಮಾದರಿಯ ಶಿಕ್ಷಣ ವ್ಯಕ್ತಿಗಿಂತ ರಾಷ್ಟ್ರ ಮುಖ್ಯ ಎಂಬ ಅಬ್ದುಲ್ ಕಲಾಂ ಅವರ ಯೋಜನೆಗಳು ನನ್ನ ಮಗನಲ್ಲಿ ಹುಟ್ಟುವುದಕ್ಕೆ ಕಾರಣವಾಯಿತು. ಮುಂದೆ ಇಲ್ಲಿ ಕಲಿತ ಸಂಸ್ಕಾರ ಶಿಕ್ಷಣ ಅವನಿಂದ ದೇಶಕ್ಕೆ ಏನಾದರೂ ಸೇವೆ ಸಿಗುವಲ್ಲಿ ಉಪಯೋಗವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಎಕ್ಸಲೆಂಟ್ ಸಂಸ್ಥೆ ವಿನಯಯೆಂಬ ಬೆಳಕು ನೀಡುತ್ತದೆ. ಈ ಬೆಳಕಿನ ಸಾನಿಧ್ಯವಲಯಕ್ಕೆ ಸಿಕ್ಕಿ ಬಿದ್ದವುಗಳೆಲ್ಲಾ ಜ್ಯೋತಿರ್ಮಯ ವಾಗುತ್ತದೆ. ಪಠ್ಯ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಮೌಲ್ಯಯುತ ಶಿಕ್ಷಣ ನೀಡುತ್ತಾ ಭಾರತದ ಭವಿಷ್ಯ ನರ‍್ಮಾಣಕ್ಕೆ ಶ್ರೇಷ್ಠ ಯುವ ಸಮುದಾಯವನ್ನು ಕೊಡುವುದೇ ನಮ್ಮ ಸಂಕಲ್ಪ ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನ್ನಿಡುವ, ಮಾನವ ಬದುಕಿನ ನೋವಿಗೆ ನಲಿವಿಗೆ ದನಿಗೂಡಿಸಲು ಈ ಯಶಸ್ಸು ಪ್ರೇರಣೆ ಕೊಡಲಿ ಎಂದರು.
ಸಂಸ್ಥೆಯ ಕಾರ‍್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಸ್ಪರ್ಧಾತ್ಮಕ ಪರೀಕ್ಷೆಗಳ ನಿರ್ದೇಶಕ ಡಾ. ಪ್ರಶಾಂತ್ ಹೆಗ್ಡೆ, ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಉಪನ್ಯಾಸಕ ವೃಂದ ಉಪಸ್ಥಿತರಿದ್ದರು. ಉಪನ್ಯಾಸಕ ವಿಕ್ರಮ್ ನಾಯಕ್ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here