ದಾವಣಗೆರೆ :ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕೇರಳದ ಗಡಿನಾಡಿನ ಶಾಖೆಯ ಅಧ್ಯಕ್ಷರಾದ ಜಯಲಕ್ಷ್ಮಿ ಕಾರಂತ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಈ ಸುಗಮ ಸಂಗೀತ ಕಾರ್ಯಾಗಾರದಲ್ಲಿ ಭಾಗವಹಿಸಿದ ಮಕ್ಕಳಿಗೆ, ಅತಿಥಿಗಳಿಗೆ ಸ್ವಾಗತಿಸಿದರು, ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಬಾಲಕೃಷ್ಣ ಚೆರುಗೋಳಿ, ಸಂಗೀತ ಸಂಪನ್ಮೂಲ ವ್ಯಕ್ರಿಗಳಾದ ಪುತ್ತೂರಿನ ಉದಯಗಾನ ಸಂಗೀತ ಶಾಲೆಯ ಶಿಕ್ಷಕಿಯರಾದ ಸುಮನಾರಾವ್ ಮತ್ತು ಕುಮಾರಿ ಸುಪ್ರಜಾ ರಾವ್ ಸಂಗೀತ ಅಚ್ಚುಕಟ್ಟಾಗಿ ಸಂಗೀತ ಸಂಪ್ರಾದಾಯಕ ರಾಗ, ತಾಳದೊಂದಿಗೆ ತರಬೇತಿ ನೀಡಿದರು. ಕೇರಳ ಗಡಿನಾಡಿನಲ್ಲಿ ಕನ್ನಡ ಮಕ್ಕಳು, ಅತ್ಯಾಸಕ್ತಿಯಿಂದ, ತಾಳ್ಮೆಯಿಂದ ಸಂಗೀತ ತರಬೇತಿ ಪಡೆದಿದ್ದು ಶ್ಲಾಘನೀಯ ಎಂದರು.
ಚೇತನ ಹೆಬ್ಬಾರ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ಶ್ರೀಮತಿ ಜಯಲಕ್ಷ್ಮಿ ಚಂದ್ರಶೇಖರ ಹೊಳ್ಳ ನಿರೂಪಿಸಿದರು. ಕೊನೆಯಲ್ಲಿ ಚಂದನ್ ಕಾರಂತ್ ವಂದಿಸಿದರು.