ಉಡುಪಿ ದೊಡ್ಡಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಕಪಿಲ ಮಹರ್ಷಿಗಳ ಸಾನಿಧ್ಯವಾದ ಗಾಯತ್ರಿ ಧ್ಯಾನಪೀಠದಲ್ಲಿ ನೂತನವಾಗಿ ರಚಿಸಲಾದ ಶಿಲಾಮಯ ಗುಡಿಯಲ್ಲಿ ಪ ಪಂಚಮುಖಿ ಗಾಯತ್ರಿ ದೇವಿಯ ಪ್ರತಿಷ್ಠಾಪನ ಬ್ರಹ್ಮಕಲಶೋತ್ಸವದ ಪ್ರಯುಕ್ತ ಕ್ಷೇತ್ರದ ನವ ಶಕ್ತಿ ವೇದಿಕೆಯಲ್ಲಿ ವಿವಿಧ ಕಲಾವಿದರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಯಂಕಾಲ ಗಂಟೆ 6:30 ರಿಂದ ನೆರವೇರಲಿದೆ. ತಾರೀಕು ಒಂದರ ಸಂಜೆ ಗಂಟೆ ಆರರಿಂದ ಮಯೂರ ನೃತ್ಯ ಕಲಾತಂಡ ವಿದುಷಿ ಶ್ರಾವ್ಯ ಹಿರಿಯಡ್ಕ ಮತ್ತು ತಂಡದವರಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳು ತಾರೀಕು ಎರಡರ ಶುಕ್ರವಾರದಂದು ವಾಗ್ದೇವಿ ನೃತ್ಯಲಯ ಕೆಆರ್ ಪುರಂ ಬೆಂಗಳೂರು ಇವರಿಂದ ಶಕ್ತಿ ನೃತ್ಯ ವೈಭವ ತಾರೀಕು 3ರ ಶನಿವಾರದಂದು ಡಾ. ಮಂಜರಿ ಚಂದ್ರ ಪುಷ್ಪರಾಜ್ ಇವರ ಸೃಷ್ಟಿಕಲ ಕುಟೀರದ ಕಲಾವಿದರಿಂದ ವೈವಿಧ್ಯಮಯ ಕಾರ್ಯಕ್ರಮಗಳು
ತಾರೀಕು ನಾಲ್ಕರ ಭಾನುವಾರದಂದು ಅಮ್ಮ ಕಲಾವಿದೆರ್ ಕುಡ್ಲ ಅಭಿನಯಿಸುವ ತುಳುನಾಡ ಕಲಾ ಬಿರ್ಸೆ ಖ್ಯಾತಿಯ ದೀಪಕ್ ರೈ ಪಾಣಾಜೆ ಮಂಗಳೂರು ಮೀನಾತಿ ರಾಘವೇಂದ್ರ ರೈ ಅಭಿನಯದಲ್ಲಿ ರಂಗದ ರಾಜ ಖ್ಯಾತಿಯ ಸುಂದರ ರೈ ಮಂದಾರ ನಿರ್ದೇಶಿಸಿ ಅಭಿನಯಿಸುವ ನಾಟಕ ಪ್ರದರ್ಶಿತ ಕೊಳ್ಳಲಿರುವುದು.
ದಿನಂಪ್ರತಿ ವಿವಿಧ ಬಜನಾ ತಂಡಗಳಿಂದ ಭಜನೆ ಸಂಕೇತನೆ ನೃತ್ಯ ಭಜನೆಗಳು ಕೂಡ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.