ಮಂಗಳೂರಿನಲ್ಲಿ ಮತ್ತೆ ಹರಿದ ನೆತ್ತರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಎಂಬಾತನ ಭೀಕರ ಹತ್ಯೆ..!

0
1955

ಮಂಗಳೂರು : ಬಜ್ಪೆ ಸಮೀಪದ ಕಿನ್ನಿಕಂಬಳ ಬಳಿ ಅಪರಿಚಿತ ವ್ಯಕ್ತಿಗಳಿಂದ ಸುರತ್ಕಲ್ ನ ಫಾಜಿಲ್ ಹತ್ಯೆಯ ಆರೋಪಿ ಸುಹಾಸ್ ಶೆಟ್ಟಿ ಬಜ್ಪೆ ಎಂಬಾತನಿಗೆ ಮಾರಣಾಂತಿಕ ದಾಳಿ ನಡೆಸಿದ್ದಾರೆ. ದಾಳಿಯ ರಭಸಕ್ಕೆ ತಲೆಗೆ, ಕೈ, ಕಾಲಿಗೆ ಪೆಟ್ಟಾಗಿ ರಕ್ತದ ಮಡುವಿನಲ್ಲಿದ್ದ ಸುಹಾಸ್ ಎಂಬಾತನನ್ನು ಬಜ್ಪೆ ಪೊಲೀಸರು ಎಜೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿ ಮಧ್ಯದಲ್ಲಿ ಕೊನೆಯುಸಿರು ಎಳೆದಿದ್ದಾನೆ ಎಂದು ತಿಳಿದು ಬಂದಿದೆ.


ಸುಹಾಸ್ ಶೆಟ್ಟಿ ಇನ್ನೋವಾ ಕಾರ್ ನಲ್ಲಿ ಬಜ್ಪೆಯ ಕಿನ್ನಿಕಂಬಳ ಬಳಿ ಹೋಗುತ್ತಿರುವ ಸಂದರ್ಭ, ಅದನ್ನೇ ಬೆನ್ನಟ್ಟಿದ ದುಷ್ಕರ್ಮಿಗಳು ಮೀನಿನ ಪಿಕ್ ಅಪ್ ವಾಹನದಲ್ಲಿ, ಸುಹಾಸ್ ಶೆಟ್ಟಿಯ ಇನ್ನೋವಾ ಕಾರನ್ನು ಅಡ್ಡಕಟ್ಟಿದ್ದಾರೆ. ಆ ಸಂಧರ್ಭ ಸುಹಾಸ್ ಶೆಟ್ಟಿ ಚಲಾಯಿಸುತ್ತಿದ್ದ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಅಲ್ಲೇ ಇದ್ದ ಹೇರ್ ಕಟ್ಟಿಂಗ್ ಸಲೂನ್ ಗೆ ನುಗ್ಗಿದೆ. ಈ ವೇಳೆ ಗಾಡಿಯಲ್ಲಿ ಸುಹಾಸ್ ಶೆಟ್ಟಿ ಇಳಿಯುವಾಗ 4 ರಿಂದ 5 ಜನರ ಯುವಕರ ತಂಡ ಆತನನ್ನು ಬೆನ್ನತ್ತಿಕೊಂಡು ಹೋಗಿ ತಲವಾರಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಹತ್ಯೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here