ಶ್ರೇಷ್ಠ ಕಾರ್ಯಕ್ಕೆ “ವಿನ್ಯಾಸ ಅಂಗವಿಕಲರ ಸಂಸ್ಥೆ”ಗೆ ಬೆಂಬಲಿಸಿ

0
116


ಬೆಂಗಳೂರು, ಮೇ, 17; ವಿನ್ಯಾಸ ಟ್ರಸ್ಟ್ ಪ್ರಸ್ತುತ 60 ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳನ್ನು ನೋಡಿಕೊಳ್ಳುತ್ತಿದ್ದು, ಪಿಯುಸಿಯಿಂದ ಸ್ನಾತಕೋತ್ತರ ಪದವಿಯವರೆಗೆ ಶಿಕ್ಷಣ ಒದಗಿಸುತ್ತಿದೆ. ಅವರಿಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಉಚಿತವಾಗಿ ನೀಡುತ್ತಿದೆ. ಅನಿವಾರ್ಯ ಪರಿಸ್ಥಿತಿಯಿಂದಾಗಿ ಟ್ರಸ್ಟ್‌ಗೆ ಮಾಸಿಕ 62,000 ಸಾವಿರ ರೂಪಾಯಿ ಬಾಡಿಗೆ ಆಧಾರದ ಮೇಲೆ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವಂತೆ ಒತ್ತಾಯಿಸಲಾಗಿದೆ. ಹಾಗಾಗಿ ಹೃದಯವಂತ ದಾನಿಗಳು ತಕ್ಷಣವೇ ನೆರವಿಗೆ ಧಾವಿಸುವಂತೆ ಮನವಿ ಮಾಡಿದೆ.
ದಾನಿಗಳು ವಿಶೇಷಚೇನ ಮಕ್ಕಳಿಗೆ ಒಂದು ಕೊಠಡಿಯ ಬಾಡಿಗೆ ದರವನ್ನು ಪಾವತಿಸಿ ನೆರವಾಗಬೇಕು. ಒಂದು ಕೊಠಡಿಯನ್ನು ಪ್ರಾಯೋಜಿಸಲು ದಾನಿಗಳಿಗೆ ತಿಂಗಳಿಗೆ 6,200 ರೂ ವೆಚ್ಚವಾಗಲಿದೆ. ಕೊಠಡಿಗಳಿಗೆ ದಾನಿಗಳು ಅಥವಾ ಅವರ ಪ್ರೀತಿಪಾತ್ರರ ಹೆಸರಿಡಲಾಗುತ್ತದೆ. ಯಾವುದೇ ಶಾಶ್ವತ ಬದ್ಧತೆ ಇಲ್ಲದೆ ತಮ್ಮ ಹೆಸರನ್ನು ಜೀವಂತವಾಗಿಡಲು ಇದೊಂದು ಸುವರ್ಣಾವಕಾಶವಾಗಿದೆ. ವಿನ್ಯಾಸ ಟ್ರಸ್ಟ್ ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳನ್ನು ಬೆಂಬಲಿಸುತ್ತಿರುವ ಒಂದು ಸರ್ಕಾರೇತರ ಸಂಸ್ಥೆಯಾಗಿದೆ ,ಇದು ಸಂಪೂರ್ಣವಾಗಿ ವಿಶೇಷೆ ಚೆತನರ ಶ್ರೇಯೋಭಿವೃದ್ಧಿಗೆ ತನ್ನನ್ನು ಸಮರ್ಪಿಸಿಕೊಂಡಿದೆ ಎಂದು ಹೇಳಿದ್ದಾರೆ.
ವಿನ್ಯಾಸ ಟ್ರಸ್ಟ್‌ಗೆ ನೀಡುವ ದೇಣಿಗೆಗಳು 80G ತೆರಿಗೆ ವಿನಾಯಿತಿಗೆ ಒಳಪಪಟ್ಟಿವೆ. ಈ ವಿನ್ಯಾಸ ಟ್ರಸ್ಟ್ ರಿಜಿಸ್ಟರ್ಡ್ ಟ್ರಸ್ಟ್ ಆಗಿದೆ, ಆದಾಯ ತೆರಿಗೆ ವಿನಾಯಿತಿಯಿಂದ ಗುರುತಿಸಲ್ಪಟ್ಟಿದೆ ಮತ್ತು ಧರ್ಪೆನ್ ರೆಗ್ ಸಂಖ್ಯೆ ಅನ್ನು ಹೊಂದಿದೆ. ವಿನ್ಯಾಸ ಟ್ರಸ್ಟ್ ಅನ್ನು ಬೆಂಬಲಿಸಲು ಹಾಗೂ ದೇಣಿಗೆ ನೀಡಲು ಇಚ್ಛಿಸುವವರು ದಯವಿಟ್ಟು ಸಂಪರ್ಕಿಸಿ: 9880701701

LEAVE A REPLY

Please enter your comment!
Please enter your name here