ಮೂಲ್ಕಿ ಒಂಬತ್ತು ಮಾಗಣೆಯ ಅಧಿದೇವತೆ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಬ್ರಹ್ಮರಥೋತ್ಸವದಂದು ನಡೆದ ಬ್ರಹ್ಮರಥದ ಅವಘಡದ ಹಿನ್ನೆಲೆ ಕ್ಷೇತ್ರದಲ್ಲಿ ದೈವಜ್ಞರಾದ ವಳಕ್ಕುಂಜ ಮುರಳಿಕೃಷ್ಣ ಶರ್ಮ ನೇತೃತ್ವದಲ್ಲಿ ಅಷ್ಟಮಂಗಳ ಪ್ರಶ್ನಾ ಪ್ರಕ್ರಿಯೆಗೆ ಬುಧವಾರ ಮುಂಜಾನೆ ಚಾಲನೆ ನೀಡಲಾಯಿತು. ಮುಂಜಾನೆ ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಅತ್ತೂರು ಬೈಲು ವೆಂಕಟರಾಜ ಉಡುಪ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆ ನಡೆದು ಕ್ಷೇತ್ರದ ಆನುವಂಶಿಕ ಮೊಕೇಸರ ದುಗ್ಗಣ್ಣ ಸಾವಂತ ಅರಸರ ನೇತೃತ್ವದಲ್ಲಿ ದೈವಜ್ಞ ಒಳಕುಂಜ ಮುರಳಿ ಕೃಷ್ಣಶರ್ಮ ಅವರನ್ನು ಸ್ವಾಗತಿಸಿ ದೇವಸ್ಥಾನಕ್ಕೆ ಕರೆ ತರಲಾಯಿತು. ಬಳಿಕ ಮಂಡಲ ರಚಿಸಿ ಕನ್ನಿಕೆಯಿಂದ ರಾಶಿ ಪೂಜೆ ಹಾಗೂ ಸ್ವರ್ಣ ನಿಕ್ಷೇಪದ ಮೂಲಕ ಅಷ್ಟಮಂಗಳ ಪ್ರಶ್ನೆಗೆ ಚಾಲನೆ ನೀಡಲಾಯಿತು. ಪ್ರಶ್ನೆಯಲ್ಲಿ ಧನು ರಾಶಿಯಿಂದ ಆರಂಭ ಶುಭ ಸೂಚನೆ ಬಂದು ಪ್ರಥಮ ರಾಶಿಗೆ ಗುರು ಬಲ ಇರುವ ಕಾರಣ ಮುಂದಿನ ದಿನಗಳಲ್ಲಿ ದೇವಸ್ಥಾನದ ಸಮಗ್ರ ಅಭಿವೃದ್ಧಿಯಾಗುವ ಮೂಲ ಲಕ್ಷಣಗಳ ಬಗ್ಗೆ ಎಂದು ದೈವಜ್ಞರು ಮಾಹಿತಿ ನೀಡಿದರು. ಜೂ. 23ರಂದು ಎರಡನೇ ಭಾಗವಾಗಿ ನಿರಂತರ ಅಷ್ಟಮಂಗಳ ಪ್ರಶ್ನಾ ಚಿಂತನೆ ನಡೆಯಲಿದೆ ಎಂದು ಕ್ಷೇತ್ರದ ಒಂಬತ್ತು ಮಹಾಗಣಿಯ ಭಕ್ತರಿಗೆ ತಿಳಿಸಲಾಯಿತು. ವಾಸುದೇವ ಭಟ್ ಪಾವಂಜೆ, ವಾದಿರಾಜ ಉಪಾಧ್ಯಾಯ ಕೊಲಕಾಡಿ. ಧರ್ಮದರ್ಶಿ ಡಾ. . ಹರಿಕೃಷ್ಣ ಪುನರೂರು, ಶ್ರೀ ವೆಂಕಟರಮಣ ದೇವಾಲಯದ ಮೊತ್ತೇಸ ಅತುಲ್ ಕುಡ್ಡ, ಸಸಿಹಿತ್ತು ಶ್ರೀ ಭಗವತಿ ದೇವಸ್ಥಾನದ ಆರ್ಚಕ ಅಪ್ಪು ಯಾನೇ ಶ್ರೀನಿವಾಸ ಪೂಜಾರಿ, ಅಧ್ಯಕ್ಷ ವಾಮನ್ ಇಡ್ಯಾ, ಶಾಸಕರಾದ ಉಮಾನಾಥ ಕೋಟ್ಯಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ: ಮಿಥುನ್ ರೈ, ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕೆ. ಭುವನಾಭಿರಾಮ ಉಡುಪ, ಉದ್ಯಮಿ ಅರವಿಂದ ಪೂಂಜ, ಕೋಲ್ನಾಡುಗುತ್ತು ರಾಮಚಂದ್ರ ನಾಯ್, ಶರತ್ ಎನ್. ಸಾಲಿಯಾನ್, ಕೊಡೆತ್ತೂರುಗುತ್ತು ಗುತ್ತಿನಾರ್ ನಿತೀನ್ ಶೆಟ್ಟಿ, ಚಂದ್ರಶೇಖರ ಕಾಸಪ್ಪಯ್ಯನವರ ಮನೆ. ಕೊಳಚಿಕಂಬಳ ಗುರಿಕಾರ ಹರಿಶ್ಚಂದ್ರ ಪಿ ಸಾಲಿಯಾನ್, ಸುನಿಲ್ ಆಳ್ವ, ಶೇಖರ್ ಶೆಟ್ಟಿ ಕಿಲ್ಪಾಡಿ, ಸುಕುಮಾರ್ ಶೆಟ್ಟಿ, ಮೂಲ್ಕಿ ನಗರ ಪಂಚಾಯತಿ ಅಧ್ಯಕ್ಷ ಸತೀಶ್ ಅಂಚನ್, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮೂಲ್ಕಿ ಅರಮನೆಯ ಗೌತಮ್ ಜೈನ್, ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ವಿದ್ವಾನ್ ನಾಗೇಶ ಬಪ್ಪನಾಡು, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಉದಯಕುಮಾರ್ ಶೆಟ್ಟಿ ಅಧಿಧನ್, ರಂಗನಾಥ್ ಶೆಟ್ಟಿ, ದಿನೇಶ್ ಹೆಗ್ಡೆ ಮಾನಂಪಾಡಿ ಸತೀಶ್ ಬಂಡಾರಿ, ವಿನೋದ್ ಸಾಲಿಯಾನ್, ಪುರಂದರ ಸಾಲಿಯಾನ್, ಶಿವಶಂಕರ್ ವರ್ಮ, ಉಪಸ್ಥಿತರಿದ್ದರು.