ಹೆಬ್ರಿ : ಪೆರ್ಡೂರು ಸಮೀಪದ ಕೀಳಿಂಜೆ ಮೂಲದ ಕೆ.ರತ್ನಾಕರ ಆಚಾರ್ಯ ಬೆಂಗಳೂರು ( ೭೭) ಮಂಗಳವಾರ ಬೆಂಗಳೂರಿನಲ್ಲಿ ನಿಧನರಾದರು. ಬೆಂಗಳೂರಿನಲ್ಲಿ ಮಂಗಳೂರು ಜುವೆಲ್ಲರ್ಸ್ ಸ್ವರ್ಣ ಉದ್ಯಮ ಸಂಸ್ಥೆಯನ್ನು ಸ್ಥಾಪಿಸಿದ್ದರು. ಸಮಾಜಮುಖಿ ಸೇವೆಯಲ್ಲಿ ಸಕ್ರೀಯರಾಗಿರುವ ಕೆ.ರತ್ನಾಕರ ಆಚಾರ್ಯ ಅವರು ದಕ್ಷಿಣಕನ್ನಡ ಜಿಲ್ಲಾ ವಿಶ್ವಕರ್ಮ ಸಮಾಜಸೇವಾ ಸಂಘ ಯಲಹಂಕ ಬೆಂಗಳೂರು ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.