ಗ್ರಾಮ ಪಂಚಾಯತ್ ನಲ್ಲಿ ಬೆಳಾಲು ಬೇಸಿಗೆ ಶಿಬಿರ

0
47

ಬೆಳಾಲು: ಗ್ರಾಮೀಣ ಮಕ್ಕಳಿಗಾಗಿ ಬೆಳಾಲು ಗ್ರಾಮ ಪಂಚಾಯಿತ್ ಅರಿವು ಕೇಂದ್ರದಲ್ಲಿ ಬೇಸಿಗೆ ಶಿಬಿರದ ಸಮರೋಪ ಸಮಾರಂಭ ಗ್ರಾಮ ಪಂಚಾಯತ್ ಅರಿವು ಕೇಂದ್ರದಲ್ಲಿ ದಿನಾಂಕ 15- 5 -2025 ರಿಂದ ಆಯೋಜಿಸಲಾದ ಬೇಸಿಗೆ ಶಿಬಿರದ ಸಮರೋಪ ಸಮಾರಂಭವು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 22- 5- 2025 ರಂದು ನಡೆಯಿತು ವೇದಿಕೆಯಲ್ಲಿ ಅಭಿವೃದ್ಧಿ ಅಧಿಕಾರಿ ಶ್ರೀ ತಾರಾನಾಥ ನಾಯ್ಕ ಕೆ ,ಬೆಳ್ತಂಗಡಿ ತಾಲೂಕು ಪಂಚಾಯಿತ್ ನರೇಗಾ ತಾಂತ್ರಿಕ ಸಹಾಯಕರಾದ ಶ್ರೀಮತಿ ರೇಷ್ಮಾ ಹಾಗೂ ತಾಲೂಕು ಶ್ರೀ ಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ನಿಶಾ ಬನಂದೂರು ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಕುಮಾರಿ ಚಾರ್ವಿಗೆ ಪ್ರಾರ್ಥಿಸಿ, ಕುಮಾರಿ ದೀಪ್ತಿ ಸ್ವಾಗತಿಸಿದರು. ಕುಮಾರಿ ದೀಕ್ಷಾ ಶಿಬಿರದ ಅನಿಸಿಕೆಯನ್ನು ಹೇಳಿದರು. ಶಿಬಿರಾರ್ಥಿಗಳಿಗೆ ಭಾಗವಹಿಸುವಿಕೆಯ ಪ್ರಮಾಣ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಲಾಯಿತು. ಅರಿವು ಕೇಂದ್ರದ ಮೇಲ್ವಿಚಾರಕರಾದ ಡೀಕಯ್ಯ ಗೌಡ ಅರಣೆಮಾರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ವಿತ್ತರು. ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here