ಹೆಬ್ರಿ ಬಡಾಗುಡ್ಡೆ ಕೊರತಿ ಕೊರಗಜ್ಜ ನೂತನ ಶಿಲಾಮಯ ದೈವಸ್ಥಾನ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ

0
312

ಹೆಬ್ರಿ ಬಡಾಗುಡ್ಡೆ ಕೊರತಿ ಕೊರಗಜ್ಜ ನೂತನ ಶಿಲಾಮಯ ದೈವಸ್ಥಾನ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಎಚ್.‌ಜನಾರ್ಧನ್‌ ಮಾತನಾಡಿದರು.

ಹೆಬ್ರಿ ಬಡಾಗುಡ್ಡೆ ಕೊರತಿ ಕೊರಗಜ್ಜ ದೈವಸ್ಥಾನ : ಶಿಲಾಮಯ ದೈವಸ್ಥಾನ ಲೋಕಾರ್ಪಣೆ.
ಬಡಾಗುಡ್ಡೆಯಲ್ಲಿ ಕೊರಗ ಸಮುದಾಯ ಭವನ : ಶಾಸಕ ಸುನಿಲ್‌ ಕುಮಾರ್‌

ಹೆಬ್ರಿ : ಹೆಬ್ರಿ ಬಡಾಗುಡ್ಡೆ ಕೊರತಿ ಕೊರಗಜ್ಜ ದೈವಸ್ಥಾನ ಜೀರ್ಣೋದ್ಧಾರಗೊಂಡಿದ್ದು ಬುಧವಾರ ಮತ್ತು ಗುರುವಾರ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೂತನ ಶಿಲಾಮಯ ದೈವಸ್ಥಾನದ ಲೋಕಾರ್ಪಣೆ, ಪುನರ್‌ ಪ್ರತಿಷ್ಠಾಪನಾ ಕಾರ್ಯಕ್ರಮ, ಬ್ರಹ್ಮಕಲಶೋತ್ಸವ ಮತ್ತು ಅನ್ನಸಂತರ್ಪಣೆ ನಡೆಯಿತು. ತಾಣ ಅರ್ಧನಾರೀಶ್ವರ ದೇವಸ್ಥಾನ ದಿಂದ ಬಡಾಗುಡ್ಡೆ ಕ್ಷೇತ್ರದ ತನಕ ವೈಭವದ ಪುರಮೆರವಣಿಗೆ ನಡೆಯಿತು. ಬಳಿಕ ಅರ್ಚಕ ವೇದಮೂರ್ತಿ ಹೆಬ್ರಿ ನಾಗರಾಜ ಜೋಯಿಸ್‌ ನೇತ್ರತ್ವದಲ್ಲಿ ಬಳಿಕ ವಾಸ್ತುಹೋಮ, ಗಣಹೋಮ, ಪ್ರಧಾನ ಹೋಮ, ಬ್ರಹ್ಮಕಲಶ, ಮಹಾಪೂಜೆ ಸಹಿತ ವಿವಿಧ ವಿಧಿವಿಧಾನಗಳು ನಡೆಯಿತು.
ಗುರುವಾರ ಹೆಬ್ರಿ ಬಡಾಗುಡ್ಡೆ ಕೊರತಿ ಕೊರಗಜ್ಜ ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯಕ್‌ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಮಾತನಾಡಿ ಸುಂದರವಾದ ಶಿಲಾಮಯ ದೈವಸ್ಥಾನ ಎಲ್ಲರ ಸಹಕಾರದಲ್ಲಿ ನಿರ್ಮಾಣವಾಗಿದೆ. ಧಾರ್ಮಿಕತೆ ನಿತ್ಯ ಜೀವನದ ಭಾಗ ಆಗಿರುವುದರಿಂದ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿ ನಡೆದಿದೆ. ಬಡಾಗುಡ್ಡೆಗೆ ಸರ್ಕಾರದ ಅನುದಾನದಿಂದ ಸಮುದಾಯ ಭವನ ನಿರ್ಮಾಣಕ್ಕೆ ಆದ್ಯತೆಯಲ್ಲಿ ಪ್ರಯತ್ನಿಸಲಾಗುವುದು ಎಂದರು.
ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರೀಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಮುಖಂಡ ಮುನಿಯಾಲು ಉದಯ ಶೆಟ್ಟಿ ಮಾತನಾಡಿ ಕೊರಗ ಸಮುದಾಯದ ಮಂದಿ ಹಿಂಜರಿಕೆ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರಬೇಕು, ಅತೀ ಹೆಚ್ಚು ಶಿಕ್ಷಣ ಪಡೆದು ಪ್ರತಿಭಾವಂತರಾಗಬೇಕು, ತಮ್ಮ ಪ್ರದೇಶದಲ್ಲಿ ಟ್ರಸ್ಟ್‌ ರಚಿಸಿ ಆರೋಗ್ಯ ಮತ್ತು ಶಿಕ್ಷಣಕ್ಕೆ ನೆರವಾಗಬೇಕು, ತಾನು ಸರ್ವ ರೀತಿಯಲ್ಲಿ ಸಹಕಾರ ನೀಡುವುದಾಗಿ ತಿಳಿಸಿದರು.
ಬಡಾಗುಡ್ಡೆ ಕೊರತಿ ಕೊರಗಜ್ಜ ಕ್ಷೇತ್ರದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಊರಿನ ಹಬ್ಬದಂತೆ ಯಶಸ್ಸು ಕಂಡಿದೆ. ಕ್ಷೇತ್ರದ ಮಹಿಮೆ ಲೋಕವ್ಯಾಪಿಯಾಗಲಿದೆ ಎಂದು ಆನಂದ ಪೂಜಾರಿ ಹೇಳಿದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕನ್ಯಾನ ಲಕ್ಷ್ಮೀ ನಾರಾಯಣ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರನಾಥ ಬಂಗೇರ, ಸದಸ್ಯ ಎಚ್.ಬಿ.ಸುರೇಶ್‌, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯಕ್‌, ಗೌರವಾಧ್ಯಕ್ಷ ಹೆಬ್ರಿ ನಾಗರಾಜ ಜೋಯಿಸ್‌, ಪ್ರಧಾನ ಕಾರ್ಯದರ್ಶಿ ಎಚ್.‌ಜನಾರ್ಧನ್‌, ಕೋಶಾಧಿಕಾರಿ ಶಿವಪ್ರಸಾದ ಕೋಟ್ಯಾನ್‌, ಸಮಿತಿಯ ಸದಸ್ಯರು, ಆಡಳಿತ ಮಂಡಳಿಯ ಅಧ್ಯಕ್ಷ ಜನಾರ್ಧನ ಬಡಾಗುಡ್ಡೆ, ಕೋಶಾಧಿಕಾರಿ ಶುಕ್ರ, ಕಾರ್ಯದರ್ಶಿ ದೀಪಾ ಎಚ್.ಬಿ ಮುಂತಾದವರು ಉಪಸ್ಥಿತರಿದ್ದರು. ದೀಪಾ ಹೆಚ್‌ ಬಡಾಗುಡ್ಡೆ ನಿರೂಪಿಸಿ ಎಚ್.ಜನಾರ್ಧನ್‌ ಸ್ವಾಗತಿಸಿ ಶಿಕ್ಷಕ ಕೀರಣ್‌ ಟೀಚರ್‌ ವಂದಿಸಿದರು. ಆನಂದ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

LEAVE A REPLY

Please enter your comment!
Please enter your name here