ಮೂಡುಬಿದಿರೆ : ಕಡಂದಲೆಯಲ್ಲಿ ಮನೆಯ ಮೇಲೆ ಬಿದ್ದ ಮರ

0
1339

ಮೂಡುಬಿದಿರೆ: ಶುಕ್ರವಾರ ಸುರಿದ ಭಾರೀ ಮಳೆ, ಬೀಸಿದ ಗಾಳಿಗೆ
ಕಡಂದಲೆ ಗ್ರಾಮ ವ್ಯಾಪ್ತಿಯ ಬಿಟಿ ರೋಡ್ ನಲ್ಲಿ ಯಶೋದಾ ಪಾಂಡು ಗೌಡ ಅವರ ಮನೆ ಮೇಲೆ ಸಂಜೆ 6 ಗಂಟೆ ಸುಮಾರಿಗೆ ಭಾರೀ ಗಾತ್ರದ ಮರವೊಂದು ಉರುಳಿ ಬಿದ್ದು ಮನೆಗೆ ತೀವ್ರ ಹಾನಿ ಯುಂಟಾಗಿದೆ.
ಯಾವುದೇ ಜೀವಾಪಾಯವಾಗಿಲ್ಲ. ಸ್ಥಳೀಯರು ಕೂಡಲೇ ಧಾವಿಸಿ ಮನೆಗೆ ಬಿದ್ದ ಮರವನ್ನು ತೆರವು ಮಾಡಲು ಸಹಕರಿಸಿದರು. ಗ್ರಾ.ಪಂ. ಪಿಡಿಓ ರಕ್ಷಿತಾ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಮಾಡಲಾಯಿತು. ಗ್ರಾಮ ಸಹಾಯಕ ರೀತೇಶ್, ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ತೊoದಾಡ್ಪು ಮೊದಲಾದವರು ಸಹಕರಿಸಿದರು.

LEAVE A REPLY

Please enter your comment!
Please enter your name here