ಮೂಡುಬಿದಿರೆ: ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ (ರಿ )ಅಮೃತ ಮಹೋತ್ಸವ ಸಂಭ್ರಮ 2025ರ “ಗೆಲ್ಲೋಣ ಬನ್ನಿ – ಶಿಕ್ಷಣ ಮತ್ತು ಜೀವನ “

0
256

ಮೂಡುಬಿದಿರೆ: ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ (ರಿ )ಮೂಡಬಿದಿರೆ ಅಮೃತ ಮಹೋತ್ಸವ ಸಂಭ್ರಮ 2025″ ಅಂಗವಾಗಿ ಮೇ ತಿಂಗಳ ಕಾರ್ಯಕ್ರಮ “ಗೆಲ್ಲೋಣ ಬನ್ನಿ – ಶಿಕ್ಷಣ ಮತ್ತು ಜೀವನ ” ಸಂಘದ ಅಮೃತ ಸಭಾಭವನ ದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಅಮೃತ ಮಹೋತ್ಸವ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಸುದರ್ಶನ್ ಮೂಡುಬಿದಿರೆ ಉದ್ಘಾಟಿಸಿದರು, ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಉಪನ್ಯಾಸಕ ಹಾಗು ಖ್ಯಾತ ವಾಗ್ಮಿ ಶ್ರೀ ಮುನಿರಾಜ ರೆಂಜಾಳ ಇವರು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಜೀವನ ವನ್ನು ಗೆಲ್ಲುವ ಬಗ್ಗೆ ಉಪನ್ಯಾಸ ನೀಡಿದರು. 10ನೆ ತರಗತಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಶೇಕಡಾ 90 ಮತ್ತು 90ಕ್ಕಿಂತ ಅಧಿಕ ಅಂಕ ಪಡೆದ ಸಮಾಜದ ಸುಮಾರು 76 ವಿದ್ಯಾರ್ಥಿ -ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು.

ಸಂಘದ ಅಧ್ಯಕ್ಷ ರಾದ ನ್ಯಾಯವಾದಿ ಶ್ರೀ ಸುರೇಶ್ ಕೆ ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು , ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಧರಣೇಂದ್ರ ಕುಮಾರ್, ಅಗ್ನಿ ಶಾಮಕ ದಳದ ಮಾಜಿ ಅಧಿಕಾರಿ ಶ್ರೀ ಯೋಗೇಶ್ ಪಿ ಬಂಗೇರ, ಮೂಡುಬಿದಿರೆಯ ಇನ್ನರ್ ವ್ಹೀಲ್ ನ ಮಾಜಿ ಅಧ್ಯಕ್ಷ ರಾದ ಶ್ರೀಮತಿ ಮೀನಾಕ್ಷಿ ನಾರಾಯಣ, ಸಂಘದ ಹಿರಿಯ ಸದಸ್ಯರಾದ ಶ್ರೀ ಪದ್ಮರಾಜ ಪೇರಿ, ಮಾಜಿ ಉಪಾಧ್ಯಕ್ಷರಾದ ಶ್ರೀ ತುಕರಾಮ ಬಂಗೇರ, ಸೇವಾ ದಳದ ಮಾಜಿ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಪೂಜಾರಿ, ಮಹಿಳಾ ಘಟಕ ದ ಮಾಜಿ ಅಧ್ಯಕ್ಷೆ ಶ್ರೀಮತಿ ಯೋಗಿತಾ ನವಾನಂದ , ಉಪಸ್ಥಿತರಿದ್ದರು.

ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಪಿ. ಕೆ. ರಾಜು ಪೂಜಾರಿ, ಶ್ರೀ ರವೀಂದ್ರ ಎಂ. ಸುವರ್ಣ, ನಿವೃತ್ತ ಸಹಾಯಕ ಆಯುಕ್ತ ಶ್ರೀ ಅಚ್ಚುತ ಪಿ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಪ್ರಕಾಶ್ ಪೂಜಾರಿ, ಉದ್ಯಮಿ ನಾರಾಯಣ ಪಿ. ಎಂ., ಆರ್ಯಭಟ ಪ್ರಶಸ್ತಿ ಪುರಸ್ಕೃತ ಶ್ರೀ ಸತೀಶ್ ಬಂಗೇರ, ಉಪಾಧ್ಯಕ್ಷ ಸುಶಾಂತ್ ಕರ್ಕೇರಾ, ಕೋಶಾಧಿಕಾರಿ ಶ್ರೀ ಜಗದೀಶ್ ಮಿಜಾರು, ಸದಸ್ಯರಾದ ಶ್ರೀ ನಾರಾಯಣ ಕೋಟ್ಯಾನ್, ಶ್ರೀ ನಾವಾನಂದ ಒಂಟಿಕಟ್ಟೆ, ಜೊತೆಕಾರ್ಯದರ್ಶಿ ಶಿವಾನಂದ ಅಂಚನ್,ಶ್ರೀ ನವೀನ್ ಪಿ. ಕುಂದರ್, ವಿಶ್ವ ವಿದ್ಯಾಲಯ ಕಾಲೇಜು ಬನ್ನಡ್ಕ ಇದರ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಮೊದಲಾದವರು ಭಾಗವಹಿಸಿದ್ದರು. ಶ್ರೀ ರೋಹನ್ ಅತಿಕಾರಬೆಟ್ಟು ಅಥಿತಿಗಳನ್ನು ಸ್ವಾಗತಿಸಿದರು, ಸಂಘದ ಉಪಾಧ್ಯಕ್ಷ ಶ್ರೀ ರವೀಂದ್ರ ಕರ್ಕೇರಾ ವಂದಿಸಿದರು.ಕಾರ್ಯದರ್ಶಿ ಗಿರೀಶ್ ಕುಮಾರ್ ಹಂಡೆಲು ಮತ್ತು ಶ್ರೀಮತಿ ಸಂಜಾತ ಕಾರ್ಯಕ್ರಮ ನಿರೂಪಿಸಿದರು, ಮಹಿಳಾ ಘಟಕ ದ ಅಧ್ಯಕ್ಷೆ ಶ್ರೀಮತಿ ಸವಿತಾ ದಿನೇಶ್ ಮತ್ತು ಖಜಾಂಚಿ ಶ್ರೀಮತಿ ಸ್ಮಿತಾ ಭಾಸ್ಕರ್ ಇವರು ಶೇಕಡಾ 90 ಮತ್ತು ಅಧಿಕ ಅಂಕ ಪಡೆದ ವಿದ್ಯಾರ್ಥಿಗಳ ವಿವರವನ್ನು ವಾಚಿಸಿದರು.

LEAVE A REPLY

Please enter your comment!
Please enter your name here