ಮೂಡುಬಿದಿರೆ ತಾಲೂಕಿನ ಕೊಟ್ರಿಂಜ ಬಡಗ ಮಿಜಾರು ಗ್ರಾಮದ ನಮೀಕ್ಷ ಮತ್ತು ಬಂಟಲಿಕೆ ಹೌಸ್ ನಿಡ್ಡೋಡಿಯ ರಮೇಶ್ ಎಂಬವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಟ್ ಕಾಲೇಜ್ ಬಳಿ ಇಂದು (ಮೇ 28) ನಡೆದಿದೆ. ನಮೀಕ್ಷ ಇವರಿಗೆ ಈಗಾಗಲೇ ಮದುವೆಯಾಗಿದ್ದು ಎರಡು ಗಂಡು ಮಕ್ಕಳಿರುತ್ತಾರೆ. ರಮೇಶ್ ಎಂಬವರು ಮೂಲತಃ ದಾವಣಗೆರೆಯವರಾಗಿದ್ದು ಮೂಡುಬಿದಿರೆಯ ಖಾಸಗಿ ವಿದ್ಯಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯಾಚರಣೆಯಿಂದ ಮೃತದೇಹ ಮೇಲೆತ್ತಲಾಗಿರುತ್ತದೆ. ಪೊಲೀಸರು ಮರಣದ ಕುರಿತು ಪರಿಶೀಲನೆ ನಡೆಸುತ್ತಿರುತ್ತಾರೆ.ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ