ಶ್ರೀ ಬೆಳ್ಳಾಡಿ ಅಶೋಕ್ ಶೆಟ್ಟಿಯವರಿಂದ ಯಕ್ಷದ್ರುವ ಪಟ್ಲ ದಶಮಾನೋತ್ಸವಕ್ಕೆ 25 ಲಕ್ಷ ರೂಪಾಯಿ ದೇಣಿಗೆ

0
98

ಉಳ್ತೂರು ಮೋಹನ್ ದಾಸ್ ಶೆಟ್ಟಿಯವರ ವಿಶೇಷ ಮನವಿಯ ಮೇರೆಗೆ ನಮ್ಮ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಪಟ್ಲ ಸತೀಶ್ ಶೆಟ್ಟಿಯವರ ಆಪ್ತ ಅಭಿಮಾನಿಗಳಾದ ಶೈಕ್ಷಣಿಕ,ಧಾರ್ಮಿಕ, ಪ್ರಾಮಾಣಿಕ,ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅದೆಷ್ಟೋ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಮತ್ತು ಅಶಕ್ತರಿಗೆ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಾ ಬಂದಿರುವ ಪ್ರಸಿದ್ಧ ಉದ್ಯಮಿ ಮೆರಿಟ್ & ಅರ್ಜುನ್ ಹಾಸ್ಪಿಟಲ್ ಸರ್ವಿಸಸ್ ಪ್ರೈ. ಲಿ ನ ಮಾಲೀಕರಾದ ಗೌರವಾನ್ವಿತ ಬೆಳ್ಳಾಡಿ ಅಶೋಕ್ ಶೆಟ್ಟಿ ಯವರು 25 ಲಕ್ಷ ದೇಣಿಗೆಯನ್ನು ನೀಡಿದ್ದಾರೆ.

ಇವರಿಗೆ ಯಕ್ಷದ್ರುವ ಪಟ್ಲ ಕೇಂದ್ರ ಸಮಿತಿಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ

ಈ ಸಂದರ್ಭದಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಗೌರವಾಧ್ಯಕ್ಷರು ಕೇಂದ್ರ ಸಮಿತಿ , ಡಾ. ಪ್ರಕಾಶ್ ಶೆಟ್ಟಿ ಬಂಜಾರ ಗೌರವಾಧ್ಯಕ್ಷರು ದಶಮಾನೋತ್ಸವ ಸಮಿತಿ, ಶ್ರೀ ಬರೋಡ ಶಶಿಧರ ಶೆಟ್ಟಿ ಅಧ್ಯಕ್ಷರು ದಶಮಾನೋತ್ಸವ ಸಮಿತಿ ಹಾಗೂ ಸರ್ವ ಪದಾಧಿಕಾರಿಗಳು ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು.

LEAVE A REPLY

Please enter your comment!
Please enter your name here