ಉಡುಪಿ ಮೆಸ್ಕಾಂ ; ಕಿರಿಯ ಪವರ್ ಮ್ಯಾನ್ ಗಳ ಸಹನಶಕ್ತಿ ಪರೀಕ್ಷೆ

0
28

ಉಡುಪಿ ; ಕರ್ನಾಟಕ ಸರಕಾರದ ಮಂಗಳೂರು ವಿದ್ಯುತ್ ಚ್ಛಕ್ತಿ ಸರಬರಾಜು ಕಂಪನಿ ನಿಯಮಿತ , ಉಡುಪಿ ವಲಯದ ಆಶ್ರಯದಲ್ಲಿ ಮೇ 26 ರಿಂದ 29ರವರೆಗೆ ಉಡುಪಿ ಮಹಾತ್ಮಾಗಾಂಧಿ ಕ್ರೀ ಡಾಂಗಣ ಅಜ್ಜರಕಾಡು ಉಡುಪಿಯಲ್ಲಿ ಕಿರಿಯ ಪವರ್ ಮ್ಯಾನ್ ಗಳ ಸಹನಶಕ್ತಿ ಪರೀಕ್ಷೆ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉಡುಪಿ ಮೆಸ್ಕಾಂ ಅಧೀಕ್ಷಕರಾದ ಶ್ರೀ ದಿನೇಶ್ ಉಪಾಧ್ಯಾಯ ದೀಪ ಬೆಳಗಿಸಿ ಚಾಲನೆ ನೀಡಿದರು. ಮೆಸ್ಕಾಂ ಮಂಗಳೂರ್ ತಾಂತ್ರಿಕ ನಿರ್ದೇಶಕರಾದ ಮಹದೇವಸ್ವಾಮಿ ಪ್ರಸನ್ನ , ಮೆಸ್ಕಾಂ ಮಂಗಳೂರಿನ ಆರ್ಥಿಕ ಸಲಹೆಗಾರರಾದ ಮುರುಳೀಧರ್ ನಾಯಕ್ , ಮೆಸ್ಕಾಂ ವಲಯ ನಿಯಂತ್ರಣ ಅಧಿಕಾರಿ ಉಮೇಶ್, ಹಾಗು ಮೆಸ್ಕಾಂ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.
ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕಿರಿಯ ಪವರ್ ಮ್ಯಾನ್ ಗಳಿಗೆ ಕಂಬ ಹತ್ತುವಿಕೆ, 100 MTR. , 800 ಮೀಟರ್ ಓಟ , ಗುಂಡು ಎಸೆತ , ಸ್ಕಿಪ್ಪಿಂಗ್,ಹಾಗೂ ವಿವಿಧ ರೀತಿಯ ಸಹನಶಕ್ತಿ ಪರೀಕ್ಷೆ ನಡೆಸಲಾಯಿತು . 13 ಮಹಿಳೆಯರು ಸಹಿತ ಸುಮಾರು 230 ಪವರ್ ಮ್ಯಾನ್ ಭಾಗವಹಿಸಿದರು.

LEAVE A REPLY

Please enter your comment!
Please enter your name here