ಪಡುಬಿದ್ರಿ ವಿದ್ವಾನ್ ಲಕ್ಷ್ಮಿನಾರಾಯಣ ಶರ್ಮ ನಿಧನ

0
121

ಪಡುಬಿದ್ರಿ ವಿದ್ವಾನ್ ಲಕ್ಷ್ಮಿನಾರಾಯಣ ಶರ್ಮರು ಹರಿಪಾದವನ್ನು ಸೇರಿದರು. ಇವರು B.Sc ಯಲ್ಲಿ ಆಗಿನ ಕಾಲದಲ್ಲಿ ಸ್ವರ್ಣಪದಕವನ್ನು ಗಳಿಸಿರುವರು.ಅಲಂಕಾರ ಶಾಸ್ತ್ರ, ದ್ವೈತ ವೇದಾಂತ, ಧರ್ಮಶಾಸ್ತ್ರ, ವ್ಯಾಕರಣ ಶಾಸ್ತ್ರಗಳಲ್ಲಿ ವಿದ್ವತ್ಪದವಿಯನ್ನು, ಸಂಸ್ಕೃತ M.A ಪದವಿಯನ್ನು ಗಳಿಸಿದ ಇವರು ಎಸ್.ಎಂ.ಎಸ್‌.ಪಿ ಸಂಸ್ಕೃತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, 18 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿರುವರು. ಅಷ್ಟ ಮಠದ ಹಲವಾರು ಯತಿವರ್ಯರಿಗೆ ಶಾಸ್ತ್ರಪಾಠ ಮಾಡಿ ಭಗವಂತನ ಕೃಪೆಗೆ ಪಾತ್ರರಾದರು, ಆದರ್ಶ ಅಧ್ಯಾಪಕರಾಗಿ ಶಾಸ್ತ್ರ ವಿಷಯದಲ್ಲಿ ಅಗಾಧವಾದ ಪಾಂಡಿತ್ಯವನ್ನು ಹೊಂದಿರುವರು. ಅಪಾರ ಶಿಷ್ಯವರ್ಗವನ್ನು ಹೊಂದಿದ ಇವರ ಆತ್ಮಕ್ಕೆ ಸದ್ಗತಿ ದೊರಕಲೆಂದು ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಶ್ರೀ ಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥಿಸಿದ್ದಾರೆ.

LEAVE A REPLY

Please enter your comment!
Please enter your name here